CrimeInternational

ನೈಜೀರಿಯಾದಲ್ಲಿ ಭಾರಿ ದೋಣಿ ದುರಂತ; 76 ಮಂದಿ ದುರ್ಮರಣ

ಅಬುಜಾ; ಭಾರಿ ಅಲೆಗಳ ಹೊಡೆತಕ್ಕೆ ದೋಣಿಯೊಂದು ಮುಳುಗಿದ್ದು,  76 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಭೀಕರ ದುರಂತ ನೈಜೀರಿಯಾದಲ್ಲಿ ನಡೆದಿದೆ. ಅನಾಂಬ್ರಾ ರಾಜ್ಯದಲ್ಲಿ 85 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ, ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಮುಳುಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದರಲ್ಲಿ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿದೆ.

 ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ದೋಣಿಯಲ್ಲಿದ್ದ ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

  ಈ ದುರಂತ ನನಗೆ ಅಪಾರ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೈಜೀರಿಯಾ ಅಧ್ಯಕ್ಷರು ಪ್ರಾರ್ಥಿಸಿದ್ದಾರೆ.

Share Post