ಅನಂತ ಪದ್ಮನಾಭ ದೇಗುಲದ ಮೊಸಳೆ ಸಾವು
ಮಂಗಳೂರು; ಕೇರಳದ ಕಾಸರಗೋಡು ಕುಂಬಳೆ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇಗುಲದಲ್ಲಿದ್ದ ಮೊಸಳೆ ಬಬಿಯಾ ಸಾವನ್ನಪ್ಪಿದೆ. ದೇವರ ಮೊಸಳೆ ಎಂದೇ ಹೆಸರಾಗಿದ್ದ ಈ ಮೊಸಳೆ ದೇವರ ನೈವೇದ್ಯ ಸ್ವೀಕಾರ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಈ ಮೊಸಳೆ ಮೇಲೆ ಭಕ್ತಿಭಾವ ಇತ್ತು.
ದೇವಸ್ಥಾನದ ಬಳಿಯ ಕೆರೆ ನೀರಿನಲ್ಲಿ ವಾಸವಿದ್ದ ಬಬಿಯಾ ದೇವರ ಮೊಸಳೆ ಅಂತಾನೇ ಪ್ರಸಿದ್ಧಿ ಪಡೆದಿತ್ತು. ದೇಗುಲದಲ್ಲಿ ಪ್ರತಿನಿತ್ಯ ಪೂಜೆಯ ನಂತರ ಬಬಿಯಾಗೆ ನೈವೇದ್ಯ ಅರ್ಪಿಸಲಾಗುತ್ತಿತ್ತು. ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿಗಳಿರುತ್ತವೆ. ಆದರೆ ಇಲ್ಲಿ ಅನಂತಪದ್ಮಾನಾಭನಿಗೆ ಮೊಸಳೆ ಕಾವಲು ಕಾಯುವ ಕೆಲಸ ಮಾಡುತ್ತಿತ್ತು.
ದೇವರ ನೈವೇದ್ಯವೇ ಇದಕ್ಕೆ ನಿತ್ಯ ಆಹಾರವಾಗಿತ್ತು. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಇತ್ತು. ಆದ್ರೆ ಯಾರ ಮೇಲೂ ದಾಳಿ ಮಾಡಿರಲಿಲ್ಲ. ಈ ಮೊಸಳೆ ಹೆಚ್ಚಿನ ತಾವಾಗಲೂ ದೇವಾಲಯದ ಎಡಬದಿಯ ಗುಹೆಯಲ್ಲಿ ಇರುತ್ತಿತ್ತು. ನೈವೇದ್ಯವನ್ನಿಟ್ಟು ಮೊಸಳೆಯನ್ನು ಕರೆಯಲಾಗುತ್ತಿತ್ತು.