SSLC Preparatory Exam; ನಮಾಜ್ಗೆಂದೇ ವೇಳಾಪಟ್ಟಿ ಬದಲಿಸಿತಾ ಸರ್ಕಾರ..?; ಏನಿದು ವಿವಾದ..?
ಉತ್ತರ ಕನ್ನಡ; ಶುಕ್ರವಾರದ ನಮಾಜ್ಗೆ ಅನುಕೂಲ ಮಾಡಿಕೊಡಲೆಂದೇ ಪರೀಕ್ಷಾ ವೇಳಾಪಟ್ಟಿಯನ್ನು ಒಂದು ದಿನಕ್ಕಾಗಿ ಸರ್ಕಾರ ಬದಲಾಯಿಸಿತಾ..? ಇಂತದ್ದೊಂದು ಅನುಮಾನವನ್ನು ಹಿಂದೂ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ. ಈ ವೇಳಾಪಟ್ಟಿಯಲ್ಲಿ ಎಲ್ಲಾ ಪರೀಕ್ಷೆಗಳೂ ಬೆಳಗ್ಗೆ 10.15ಕ್ಕೆ ಶುರುವಾಗುತ್ತವೆ. ಆದ್ರೆ ಶುಕ್ರವಾರದ ಒಂದು ಪರೀಕ್ಷೆ ಮಾತ್ರ ಮಧ್ಯಾಹ್ನ 2 ಗಂಟೆಗೆ ಶುರುವಾಗುತ್ತದೆ. ಹೀಗಾಗಿ ನಮಾಜ್ಗೆಂದೇ ಹೀಗೆ ಮಾಡಲಾಗಿದೆ ಎಂದು ಭಟ್ಕಳದ ಹಿಂದೂ ಮುಖಂಡ ಶ್ರೀಕಾಂತ ನಾಯ್ಕ ಆರೋಪ ಮಾಡಿದ್ದಾರೆ.
ರಾಜ್ಯ ಶಿಕ್ಷಣ ಇಲಾಖೆ ಮುಸ್ಲಿಮರ ತಿಷ್ಠೀಕರಣಕ್ಕಾಗಿ ಹೀಗೆ ಮಾಡುತ್ತಿದೆ ಎಂದು ಶ್ರೀಕಾಂತ್ ನಾಯ್ಕ ಆರೋಪ ಮಾಡಿದ್ದಾರೆ. ಶಿಕ್ಷಣದಲ್ಲಿ ಸಮಾನತೆ ಇರಬೇಕು. ಹೀಗೆ ಒಬ್ಬರಿಗೆ ಅನುಕೂಲ ಮಾಡಿಕೊಡಲೆಂದೇ ಹೀಗೆ ಮಾಡಲಾಗಿದೆ. ಇದು ತಪ್ಪು ಎಂದು ಶ್ರೀಕಾಂತ್ ನಾಯ್ಕ ಹೇಳಿದ್ದಾರೆ. ಆದ್ರೆ ಯಾವ ಕಾರಣಕ್ಕಾಗಿ ಹೀಗೆ ವೇಳಾಪಟ್ಟಿ ಹಾಕಲಾಗಿದೆ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಬೇಕಿದೆ. ಶಿಕ್ಷಣ ಇಲಾಖೆ ನೀಡುವ ಸ್ಪಷ್ಟನೆಯಿಂದ ನಿಜ ವಿಷಯ ಗೊತ್ತಾಗಲಿದೆ.