CrimeDistricts

ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಮಂಡ್ಯ; ಗಂಡ ಅಕ್ರಮ ಸಂಬಂಧ ಹೊಂದಿದ್ದು, ಇದರಿಂದ ಮನನೊಂದ ಮಹಿಳೆಯೊಬ್ಬರು ತನ್ನ 3 ಮಕ್ಕಳಿಗೆ ಅನ್ನದಲ್ಲಿ ವಿಷ ಉಣಿಸಿ ಸಾಯಿಸಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮದ್ದೂರು ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದೆ.

ಉಸ್ನಾ ಕೌಸರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮದ್ದೂರು ಪಟ್ಟಣದ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ (30) ತನ್ನ ಮೂರು ಮಕ್ಕಳಿಗೆ ವಿಷ ಹಾಕಿ ಕೊಂದಿದ್ದಾಳೆ. ನಂತರ ನೇಣಿಗೆ ಶರಣಾಗಿದ್ದಾಳೆ.

ಹಾರಿಸ್ (7), ಆಲಿಸಾ (4) ಅನಮ್ ಫಾತಿಮಾ (2) ಕೊಲೆಯಾದ ಮಕ್ಕಳು. ಉಸ್ನಾ ಕೌಸರ್‌ ಗಂಡ ಅಖಿಲ್ ಅಹಮದ್ ಅಕ್ರಮ ಸಂಬಂಧಕ್ಕೆ ಬೇಸತ್ತು ಈ ಕೃತ್ಯ ಎಸಗಲಾಗಿದೆ.

Share Post