ಪ್ರಿಯಕರನ ಮನೆ ಮೇಲೇರಿ ಯುವತಿ; ಆತ್ಮಹತ್ಯೆ ಬೆದರಿಕೆ!
ಬೆಂಗಳೂರು; ನಾಲ್ಕೈದು ವರ್ಷಗಳಿಂದ ಪ್ರೀತಿಸಿ ಈಗ ಕೈಕೊಟ್ಟ ಯುವಕನಿಗೆ ಬುದ್ಧಿ ಕಲಿಸುವ ಯುವತಿಯೊಬ್ಬಳು ಆತನ ಮನೆ ಏರಿ ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿ ಹೆಗ್ಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಯುವಕ ಹಾಗೂ ಯುವತಿ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಯುವಕ, ಮದುವೆಯಾಗುವುದಿಲ್ಲವೆಂದು ಕೈಕೊಟ್ಟಿದ್ದಾನೆ. ಇದರಿಂದ ಬೇಸರಗೊಂಡ ಯುವತಿ ನೇರವಾಗಿ ಆತನ ಮನೆಗೆ ತೆರಳಿದ್ದಾಳೆ. ಆಕೆ ಬರುತ್ತಿರುವುದು ನೋಡುತ್ತಿದ್ದಂತೆ, ಯುವಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದರಿಂದ ಮತ್ತಷ್ಟು ಬೇಸರಗೊಂಡ ಯುವತಿ ಪ್ರಿಯಕರ ಮನೆ ಮೇಲೇರಿ, ಚಾಕುವನ್ನು ಕೈಯಲ್ಲಿ ಹಿಡಿದಿದ್ದಾಳೆ. ಪ್ರಿಯಕರನನ್ನು ಸ್ಥಳಕ್ಕೆ ಕರೆಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ.