ಎರಡೇ ದಿನದಲ್ಲಿ ಹರಿದುಬಂತು 5 ಟಿಎಂಸಿ ನೀರು; KRSನಲ್ಲಿ 110 ಅಡಿ ಭರ್ತಿ
ಮಂಡ್ಯ; ಕೆಲ ದಿನಗಳ ಹಿಂದೆ ಮಳೆಯಿಲ್ಲದೆ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವು ಇರಲಿಲ್ಲ. ಆದ್ರೆ ಈಗ ಇದ್ದಕ್ಕಿದ್ದಂತೆ ಕೆಆರ್‌ಎಸ್ ನೀರಿನ ಮಟ್ಟ ಹೆಚ್ಚಾಗಿದೆ. ಕಳೆದ ಎರಡು ದಿನದಲ್ಲಿ ಒಳಹರಿವು ತುಂಬಾನೇ ಹೆಚ್ಚಾಗಿದ್ದು, ಎರಡೇ ದಿನದಲ್ಲಿ 5 ಟಿಎಂಸಿಯಷ್ಟು ನೀರು ಜಲಾಶಯಕ್ಕೆ ಬಂದಿದೆ. 124.80 ಅಡಿ ಗರಿಷ್ಠ ಮಟ್ಟ ನೀರು ಹಿಡಿಯುವ ಡ್ಯಾಂನಲ್ಲಿ ಸದ್ಯ 11o ಅಡಿ ತುಂಬಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಹರಿವು ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಕಳೆದ ಎರಡು ದಿನದಲ್ಲೇ 8 ಅಡಿ ನೀರು ಜಾಸ್ತಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಒಳ ಹರಿವಿನ ಪ್ರಮಾಣ 48,025 ಕ್ಯೂಸೆಕ್ ಇದೆ. ಇದೀಗ ಮಳೆ ಇನ್ನಷ್ಟು ಜಾಸ್ತಿಯಾಗಿರುವುದರಿಂದ ಅದರ ಪ್ರಮಾಣ ಇನ್ನೂ ಜಾಸ್ತಿಯಾಗುವ ಎಲ್ಲಾ ಲಕ್ಷಣಗಳೂ ಇವೆ. ಕೆಆರ್‌ಎಸ್ ಜಲಾಶಯದಲ್ಲಿ ಇದೀಗ ಒಟ್ಟು 22.809 ಟಿಎಂಸಿಯಷ್ಟು ನೀರು ಶೇಖರಣೆಯಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ರೈತರು ಖುಷಿಯಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಳಹರಿವು ಜಾಸ್ತಿಯಾಗಿದೆ. ಇನ್ನು ಹಾರಂಗಿ ಡ್ಯಾಂನಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಇನ್ನು 10 ದಿನದಲ್ಲಿ ಕೆಆರ್‌ಎಸ್ ಜಲಾಶಯ ತುಂಬುವ ಸಾಧ್ಯತೆ ಇದೆ.