CrimeDistricts

ಕೌಟುಂಬಿಕ ಕಲಹ; ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆ

ವಿಜಯಪುರ; ಕೆಎಸ್​ಆರ್​ಟಿಸಿ ನೌಕರನೋರ್ವ ಕೌಟುಂಬಿಕ ಕಲಹ ಹಿನ್ನೆಲೆ ಕೆನಾಲ್​ಗೆ ಹಾರಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಭೈರವಾಡಗಿ ಗ್ರಾಮದಲ್ಲಿ ನಡೆದಿದೆ.‌

ಗಂಗಾಧರ ಕೃಷ್ಣಪ್ಪ ಬಡಿಗೇರ ಆತ್ಮಹತ್ಯೆ ಮಾಡಿಕೊಂಡಿರುವ ನೌಕರ. ಇವರಿಗೆ ಆರು ಜನ ಹೆಣ್ಣು ಮಕ್ಕಳಿದ್ದರು.  ಭೈರವಡಗಿ ಗ್ರಾಮದ ಹತ್ತಿರ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Share Post