CrimeDistricts

Pre wedding Shoot; ಆಪರೇಷನ್‌ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್‌ ಶೂಟ್‌; ವೈದ್ಯ ಕೆಲಸದಿಂದ ವಜಾ

ಚಿತ್ರದುರ್ಗ; ಸೋಷಿಯಲ್‌ ಮೀಡಿಯಾಗಳು ಹೆಚ್ಚು ಜನಪ್ರಿಯವಾದ ಮೇಲೆ ಜನ ಹೇಗೇಗೋ ಆಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾಗಳು ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆಯೇ ಪ್ರೀ ವೆಡ್ಡಿಂಗ್‌ ಶೂಟ್‌ಗಳು ಬಂದಿದ್ದು. ಅದೂ ಕೂಡಾ ವಿಚಿತ್ರ ವಿಚಿತ್ರವಾಗಿ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿ, ಸೋಷಿಯಲ್‌ ಮೀಡಿಯಾಗದಲ್ಲಿ ಪ್ರಚಾರ ಪಡೆದುಕೊಳ್ಳುತ್ತಾರೆ. ಅದೇ ರೀತಿಯ ವೈದ್ಯರೊಬ್ಬರು ಇದೇ ರೀತಿಯ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ. ಅವರ ಕೆಲಕ್ಕೇ ಕುತ್ತು ಬಂದಿದೆ.

ಆಪರೇಷನ್‌ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್‌ ಶೂಟ್‌!

ಚಿತ್ರದುರ್ಗ ಜಿಲ್ಲೆ ಭರಮಸಾಗರದ ಸರ್ಕಾರಿ ಆಸ್ಪತ್ರೆಯ ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯರೊಬ್ಬರು ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿದ್ದರು. ಇದು ಸಾಕಷ್ಟು ವೈರಲ್‌ ಆಗಿತ್ತು. ಇದು ಮೇಲಾಧಿಕಾರಿಗಳಿಗೆ ಗೊತ್ತಾಗಿದೆ. ಜೊತೆಗೆ ಜನರಿಂದಲೂ ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ, ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮದುವೆ ಹತ್ತಿರದಲ್ಲಿರುವಾಗಲೇ ವೈದ್ಯ ಕೆಲಸ ಕಳೆದುಕೊಂಡಿದ್ದಾರೆ.

ಕೆಲಸದಿಂದ ವೈದ್ಯನ ವಜಾ

ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿದ ವೈದ್ಯ ಡಾ.ಅಭಿಷೇಕ್‌ ಅವರು ವೃತ್ತಿಯಿಂದ ವಜಾಗೊಂಡಿದ್ದಾರೆ. ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಅಭಿಷೇಕ್‌ ಅವರಿಗೆ ಮುಂದಿನ ತಿಂಗಳು ಮದುವೆ ಫಿಕ್ಸ್‌ ಆಗಿದೆ. ಈ ಕಾರಣಕ್ಕಾಗಿ ಅವರು ಆಸ್ಪತ್ರೆಯಲ್ಲೇ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿದ್ದಾರೆ. ವ್ಯಕ್ತಿಯೊಬ್ಬರಿಗೆ ಗಂಡು ಹಾಗೂ ಹೆಣ್ಣು ಆಪರೇಷನ್‌ ಮಾಡುತ್ತಿರುವಂತೆ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಲಾಗಿದೆ. ಗಂಡು ಹೆಣ್ಣು ಇಬ್ಬರೂ ವೈದ್ಯರ ವೇಷ ಧರಿಸಿ ಈ ಶೂಟ್‌ ಮಾಡಿಸಲಾಗಿದೆ.
ಡಾ.ಅಭಿಷೇಕ್ ಅವರು ಭರಮಸಾಗರ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು. ಮುಂದಿನ ತಿಂಗಳೇ ಅವರ ಮದುವೆ ಇದೆ. ಸರ್ಕಾರಿ ಕಟ್ಟಡ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಅವರು ಮದುವೆಗೆ ಮುಂಚೆ ಕೆಲಸ ಕಳೆದುಕೊಂಡಿದ್ದಾರೆ.

Share Post