ಪೆನ್ಡ್ರೈವ್ ಲೀಕ್ ಮಾಡಿದ್ದು ಇವರೇನಾ..?; ಪ್ರಜ್ವಲ್ ಕಾರು ಡ್ರೈವರ್ ಹೇಳೋದೇನು..?
ಹಾಸನದಲ್ಲಿ ಸಂಸದ ಪ್ರಜ್ವಲ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸದ್ದು ಮಾಡುತ್ತಿರುವುದು ಗೊತ್ತೇ ಇದೆ.. ಸಾವಿರಾರು ಪೆನ್ಡ್ರೈವ್ಗಳು ಎಲ್ಲೆಡೆ ಹಂಚಲ್ಪಟ್ಟಿವೆ.. ಈ ವಿಡಿಯೋಗಳು ಲೀಕ್ ಆಗಲು ಕಾರಣ ಪ್ರಜ್ವಲ್ ಕಾರು ಚಾಲಕ ಕಾರ್ತೀಕ್ ಎಂದು ಹೇಳಲಾಗುತ್ತಿತ್ತು.. ಆದ್ರೆ, ವಿಡಿಯೋಗಳು ಲೀಕ್ ಆದಾಗಿನಿಂದ ಅಜ್ಞಾತ ಸ್ಥಳದಲ್ಲಿರುವ ಕಾರ್ತೀಕ್, ಈಗ ವಿಡಿಯೋವೊಂದರನ್ನು ರಿಲೀಸ್ ಮಾಡಿದ್ದು, ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ..
ಇದನ್ನೂ ಓದಿ; ಪ್ರಜ್ವಲ್ ವಿರುದ್ಧದ ಆಶ್ಲೀಲ ವಿಡಿಯೋ ಪ್ರಕರಣ; ಅಮಿತ್ ಶಾ ಅಚ್ಚರಿ ಹೇಳಿಕೆ!
ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಿಡಿಯೋ ಮಾಡಿ ರಿಲೀಸ್ ಮಾಡಿರುವ ಕಾರ್ತೀಕ್, ಪೆನ್ ಡ್ರೈವ್ ರಿಲೀಸ್ ಆಗಿರುವ ವಿಚಾರದ ಸಂಬಂಧ ಹಲವು ಮಹತ್ವದ ಮಾಹಿತಿಗಳನ್ನು ಹೊರಗೆಡವಿದ್ದಾರೆ.. ಬಿಜೆಪಿ ನಾಯಕನ ವಿರುದ್ಧ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ..
ನಾನು ಸುಮಾರು 15 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ.. ಒಂದು ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ.. ಅವರು ನನ್ನ ಹಾಗೂ ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ ಜಮೀನು ಬರೆಸಿಕೊಂಡಿದ್ದರು.. ನನಗೆ ಹಾಗೂ ನನ್ನ ಕುಟುಂಬಕ್ಕೆ ಹಿಂಸೆ ಕೊಟ್ಟಿದ್ದರಿಂದ ನಾನು ಕೆಲಸ ಬಿಟ್ಟಿದ್ದೆ ಎಂದು ಕಾರು ಚಾಲಕ ಕಾರ್ತೀಕ್ ಹೇಳಿಕೊಂಡಿದ್ದಾರೆ..
ಇದನ್ನೂ ಓದಿ; ಇಲ್ಲಿ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ; ತಿಂಗಳು, ವರ್ಷದ ಲೆಕ್ಕದಲ್ಲಿ ಖರೀದಿ ನಡೆಯುತ್ತೆ!
ನನಗೆ ಯಾರಿಂದಲೂ ನ್ಯಾಯ ಸಿಗುವುದಿಲ್ಲ ಎಂದು ಗೊತ್ತಾದಾಗ ನನಗೆ ಬಿಜೆಪಿ ಮುಖಂಡ ದೇವರಾಜೇ ಗೌಡ ಕಾಣಿಸಿದರು.. ಅವರು ಕೂಡಾ ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು.. ಇದೇ ವೇಳೆ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ಪ್ರಜ್ವಲ್ ರೇವಣ್ಣ ಸ್ಟೇ ತಂದಿದ್ದರು.. ಇನ್ನು ದೇವರಾಜೇಗೌಡ ಅವರು, ನಾನು ಯಾರಿಗೂ ತೋರಿಸೋದಿಲ್ಲ.. ನನಗೆ ವಿಡಿಯೋಗಳು ಫೋಟೋಗಳು ಕೊಡು ಎಂದು ಕೇಳಿದ್ದರು.. ನಾನು ಅವರನ್ನು ನಂಬಿ ದೇವರಾಜೇಗೌಡ ಅವರಿಗೆ ವಿಡಿಯೋಗಳ ಒಂದು ಕಾಪಿ ಕೊಟ್ಟಿದ್ದೆ ಎಂದು ಡ್ರೈವರ್ ಕಾರ್ತೀಕ್ ಹೇಳಿಕೊಂಡಿದ್ದಾರೆ..
ಇದನ್ನೂ ಓದಿ; ಟೈರ್ ಬ್ಲಾಸ್ಟ್ ಆಗಿ ಉರುಳಿದ ಲಾರಿ; ಕಾರಿನಲ್ಲಿದ್ದ ಆರು ಮಂದಿ ದುರ್ಮರಣ!
ಯಾರಿಗೂ ಕೊಡುವುದಿಲ್ಲ ಎಂದು ವಿಡಿಯೋಗಳನ್ನು ಪಡೆದುಕೊಂಡ ದೇವರಾಜೇಗೌಡ ಅವರು ತಮ್ಮ ಸ್ವಾರ್ಥಕ್ಕಾಗಿ ವಿಡಿಯೋಗಳನ್ನು ಬಳಸಿಕೊಂಡಿದ್ದಾರೆ ಎಂದು ಡ್ರೈವರ್ ಕಾರ್ತೀಕ್ ಆರೋಪ ಮಾಡಿದ್ದಾರೆ.. ಹೊಳೆನರಸೀಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡರಿಗೆ ಬಿಟ್ಟರೆ ನಾನು ಯಾರಿಗೂ ವಿಡಿಯೋಗಳನ್ನು ಕೊಟ್ಟಿಲ್ಲ.. ಚುನಾವಣೆ ಸಮಯದಲ್ಲಿ ಆ ಪೆನ್ ಡ್ರೈವ್ಗಳು ಯಾರು ಹಂಚಿದರು ಎಂಬುದು ಕೂಡಾ ನನಗೆ ಗೊತ್ತಿಲ್ಲ ಎಂದು ಡ್ರೈವರ್ ಕಾರ್ತೀಕ್ ಸ್ಪಷ್ಟನೆ ಕೊಟ್ಟಿದ್ದಾರೆ..
ಇದನ್ನೂ ಓದಿ; ಪ್ರಜ್ವಲ್ ರೇವಣ್ಣ ವಿರುದ್ಧ ಧ್ವನಿ ಎತ್ತಿದ ನಟಿ ಪೂನಂ ಕೌರ್!
ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ನಾನು ದೇವರಾಜೇಗೌಡರ ಬಳಿ ಹೋಗುತ್ತಿರಲಿಲ್ಲ.. ಪ್ರಜ್ವಲ್ ಅವರು ಸ್ಟೇ ತಂದ ಬಗ್ಗೆಯೂ ನಾನು ದೇವರಾಜೇಗೌಡರಿಗೆ ಹೇಳಿದ್ದೆ.. ಹೀಗಿದ್ದರೂ ಅವರು ಯಾವ ಕಾರಣಕ್ಕೆ ಆ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಂಡರೋ ಗೊತ್ತಿಲ್ಲ ಎಂದು ಕಾರ್ತೀಕ್ ಹೇಳಿದ್ದಾರೆ..
ಪ್ರಕರಣ ಬೆಳಕಿಗೆ ಬಂದಾಗಿನಿಂದ ಕಾರ್ತೀಕ್ ಅಜ್ಞಾತ ಸ್ಥಳದಲ್ಲಿದ್ದಾರೆ.. ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.. ಈ ನಡುವೆ ಅವರು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ..
ಇದನ್ನೂ ಓದಿ; ಕಾಲಾಷ್ಟಮಿಯಂದು ಮಾಡುವ ಪೂಜೆ ಭಾರೀ ಪವರ್ಫುಲ್; ನಾಳೆಯೇ ಕಾಲಾಷ್ಟಮಿ