CinemaPolitics

ಪ್ರಜ್ವಲ್‌ ರೇವಣ್ಣ ವಿರುದ್ಧ ಧ್ವನಿ ಎತ್ತಿದ ನಟಿ ಪೂನಂ ಕೌರ್‌!

ಹಾಸನ ಅಶ್ಲೀಲ ವಿಡಿಯೋಗಳು ರಿಲೀಸ್‌ ಆದ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ತಂದೆ ರೇವಣ್ಣ ವಿರುದ್ಧ ತನಿಖೆ ನಡೆಯುತ್ತಿದೆ.. ಆದ್ರೆ, ಈ ಪ್ರಕರಣದ ವಿರುದ್ಧ ಚಿತ್ರರಂಗದವರು ಧ್ವನಿ ಎತ್ತುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.. ಈ ಬೆನ್ನಲ್ಲೇ ಬಹುಭಾಷಾ ನಟಿ ಪೂನಂ ಕೌರ್‌ ಈ ಬಗ್ಗೆ ಮಾತನಾಡಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಜ್ವಲ್‌ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಅಪ್‌ ಲೋಡ್‌ ಮಾಡಿದ್ದು, ಆ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಕಾಲಾಷ್ಟಮಿಯಂದು ಮಾಡುವ ಪೂಜೆ ಭಾರೀ ಪವರ್‌ಫುಲ್‌; ನಾಳೆಯೇ ಕಾಲಾಷ್ಟಮಿ

ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ನಟಿಸಿರುವ ಪೂನಂ ಕೌರ್‌, ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಾಜಕಾರಣಿಯ ಪುತ್ರನ ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ..  ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಬಂಧು ಬಳಗ ಚಿತ್ರದಲ್ಲಿ ನಟಿಸಿರುವ ಪೂನಂ ಕೌರ್, ಸಂಸದ ಪ್ರಜ್ವಲ್‌ ರೇವಣ್ಣ ಅಮಾಯಕ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.. ಅವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ..

ಇದನ್ನೂ ಓದಿ; ಮಾಜಿ ಸಚಿವ ಭೈರತಿ ಬಸವರಾಜ್‌ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ!

2800ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳು ರಿಲೀಸ್‌ ಆಗಿವೆ.. ಮಹಿಳೆಯರನ್ನು ಬೆದರಿಸಿ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.. ಹಣ ಹಾಗೂ ರಾಜಕೀಯ ಪ್ರಭಾವ ಬಳಸಿ ತಪ್ಪಿಸಿಕೊಳ್ಳುವ ಯತ್ನ ನಡೆಯುತ್ತಿದೆ.. ಪ್ರಜ್ವಲ್‌ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜರ್ಮನಿಗೆ ಹೋಗಿ ಅಲ್ಲಿ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ.. ಜನ ಇಂಥಹವರ ವಿರುದ್ಧ ತಿರುಗಿ ಬಿದ್ದರೆ ಮಾತ್ರ ಶಿಕ್ಷೆ ಕೊಡಿಸಬಹುದು ಎಂದು ನಟಿ ಪೂನಂ ಕೌರ್‌ ಹೇಳಿಕೊಂಡಿದ್ದಾರೆ..

ಇದನ್ನೂ ಓದಿ; ನಿಯಂತ್ರಣ ತಪ್ಪಿದ ಗೃಹ ಸಚಿವ ಅಮಿತ್‌ ಶಾ ಇದ್ದ ಹೆಲಿಕಾಪ್ಟರ್‌

ನಮ್ಮ ಸಾಮಾಜದಲ್ಲಿ ಹೆಣ್ಣನ್ನು ಒಂದು ಶಕ್ತಿ ಎಂದು ಪೂಜಿಸುತ್ತೇವೆ. ಇಂತಹ ಪವಿತ್ರ ದೇಶದಲ್ಲಿ ಇಂತಹ ನೀಚರೂ ಇದ್ದಾರೆ.. ಇಂತಹವರನ್ನು ನಾವು ಗೆಲ್ಲಿಸಬೇಕಾ ಎಂದು ಪೂನಂ ಕೌರ್‌ ಪ್ರಶ್ನೆ ಮಾಡಿದ್ದಾರೆ.. ಇದೆನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಾವು ಯಾರಿಗೆ ಮತ ನೀಡಬೇಕು ಎಂಬುದನ್ನು ಯೋಚಿಸಬೇಕು ಎಂದೂ ಪೂನಂ ಕೌರ್‌ ಕಿವಿ ಮಾತು ಹೇಳಿದ್ದಾರೆ..

ಇದನ್ನೂ ಓದಿ; ಮೇಕೆದಾಟು ಬಳಿ ಐವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರುಪಾಲು!

Share Post