ಕಾಲಾಷ್ಟಮಿಯಂದು ಮಾಡುವ ಪೂಜೆ ಭಾರೀ ಪವರ್‌ಫುಲ್; ನಾಳೆಯೇ ಕಾಲಾಷ್ಟಮಿ
ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿಯನ್ನು ಆಚರಿಸಲಾಗುತ್ತದೆ.. ಪುರಾಣದ ನಂಬಿಕೆಗಳ ಪ್ರಕಾರ ಕಾಲಾಷ್ಟಮಿಯನ್ನು ಭೈರವಾಷ್ಟಮಿ ಎಂದೂ ಕರೆಯವುದುಂಟು.. ಏಕೆಂದರೆ ಈ ದಿನವನ್ನು ಭೈರವನಿಗೆ ಸಮರ್ಪಿಸಲಾಗಿದೆ..
ಇದನ್ನೂ ಓದಿ; ಮಾಜಿ ಸಚಿವ ಭೈರತಿ ಬಸವರಾಜ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ!
ಕಾಲ ಭೈರವನನ್ನು ಭೈರವನಾಥ ಎಂದೂ ಕರೆಯುತ್ತಾರೆ.. ಕಾಲ ಭೈರವನನ್ನು ಶಿವನ ಕ್ರೋಧ ರೂಪವೆಂದು ಕೂಡಾ ಪರಿಗಣಿಸಲಾಗಿದ್ದು, ಶಿವನ ಐದನೇ ಅವತಾರವೆಂದೂ ಹೇಳುತ್ತಾರೆ.. ಅದಕ್ಕಾಗಿಯೇ ಈ ದಿನದಂದು ಭಗವಾನ್ ಶಿವ ಮತ್ತು ಅವನ ರೂಪವಾದ ಕಾಲ ಭೈರವನ ಆಶೀರ್ವಾದವನ್ನು ಪಡೆಯಲು ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ..
ಇದನ್ನೂ ಓದಿ; ನಿಯಂತ್ರಣ ತಪ್ಪಿದ ಗೃಹ ಸಚಿವ ಅಮಿತ್ ಶಾ ಇದ್ದ ಹೆಲಿಕಾಪ್ಟರ್
ಕಾಳಾಷ್ಟಮಿ ದಿನದಂದು ಶಿವನನ್ನು ಅವನ ರೂಪವಾದ ಕಾಲಭೈರವನ ಜೊತೆಗೆ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ.. ಇದರ ಜೊತೆಗೆ ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.. ಕಾಲ ಭೈರವನನ್ನು ಪೂಜಿಸುವುದರಿಂದ ಮಂತ್ರ ಮತ್ತು ತಂತ್ರಗಳ ವಿದ್ಯೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ.. ಈ ಮಂತ್ರ ಮತ್ತು ತಂತ್ರಕ್ಕಾಗಿ ಕಾಲ ಭೈರವನನ್ನು ನಿಶ್ಚಿತ ಮುಹೂರ್ತದಲ್ಲಿ ಪೂಜಿಸಲಾಗುತ್ತದೆ.. ಚೈತ್ರ ಮಾಸದಲ್ಲಿ ಕಾಳಾಷ್ಟಮಿ ವ್ರತವನ್ನು ಯಾವಾಗ ಮಾಡಬೇಕು..? ಈ ದಿನದಂದು ಪೂಜೆ ಮಾಡಲು ಶುಭ ಮುಹೂರ್ತ ಯಾವುದು..? ಉಪವಾಸ ಮತ್ತು ಪೂಜೆಯ ವಿಧಾನ ಯಾವುದು ಎಂಬುದನ್ನು ಇಲ್ಲಿ ನಾವು ತಿಳಿಯೋಣ.
ಇದನ್ನೂ ಓದಿ; ಮೇಕೆದಾಟು ಬಳಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು!
2024 ರ ಕಾಳಾಷ್ಟಮಿ ತಿಂಗಳು ಯಾವಾಗ..?
ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಚೈತ್ರ ಮಾಸದ ಕೃಷ್ಣ ಪಕ್ಷ ಅಷ್ಟಮಿ ತಿಥಿಯು 1ನೇ ಮೇ 2024 ರಂದು ಬುಧವಾರ ಬೆಳಗ್ಗೆ 5.45 ಕ್ಕೆ ಪ್ರಾರಂಭವಾಗುತ್ತದೆ. ಮಾರನೆಯ ದಿನ ಅಂದರೆ ಮೇ 2 ರಂದು ಬೆಳಿಗ್ಗೆ 4:01 ಕ್ಕೆ ಕೊನೆಗೊಳ್ಳುತ್ತದೆ. ಮಾಸಿಕ ಕಾಳಾಷ್ಟಮಿಯನ್ನು ಮೇ 1 ರಂದು ಬುಧವಾರ ಆಚರಿಸಲಾಗುತ್ತದೆ. ಪ್ರದೋಷಕಾಲದಲ್ಲಿ ಈ ದಿನ ಪೂಜೆ ಮಾಡಲು ಅತ್ಯಂತ ಮಂಗಳಕರ ಸಮಯ ಎಂದು ಹೇಳಲಾಗುತ್ತದೆ..
ಇದನ್ನೂ ಓದಿ; ಮತ್ತೆ ಜೈಲು ಪಾಲಾದ ಮುರುಘಾ ಮಠದ ಶಿವಮೂರ್ತಿ!
ಕಾಳಾಷ್ಟಮಿಯ ದಿನ ಈ ಪರಿಹಾರಗಳನ್ನು ಮಾಡಿ;
ಕಾಳಾಷ್ಟಮಿಯಂದು, ಬ್ರಹ್ಮ ಮುಹೂರ್ತದಲ್ಲಿ ಎದ್ದು, ಮನೆಯನ್ನು ಸ್ವಚ್ಛಗೊಳಿಸಿ, ನಿತ್ಯಕರ್ಮಗಳನ್ನು ಮಾಡಿ, ಸ್ನಾನ ಮಾಡಿ ಮತ್ತು ಬೆಳಗಿನ ಪೂಜೆಯ ಸಮಯದಲ್ಲಿ ಮನೆಯ ದೇವರ ಕೊಠಡಿಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ದೀಪ ಮತ್ತು ಧೂಪವನ್ನು ಬೆಳಗಿಸಬೇಕು.. ಈ ವೇಳೆ ಭೈರವ ದೇವರನ್ನು ನೆನಪಿಸಿಕೊಂಡು ಪೂಜೆ ಮಾಡಬೇಕು.. ಈ ದಿನ ಶಿವನ ಜೊತೆಗೆ ಶಿವನ ಇಡೀ ಕುಟುಂಬವನ್ನು ಪೂಜಿಸಬೇಕು..
ಆರತಿಯನ್ನು ಅರ್ಪಿಸಿ ಪೂಜೆಯನ್ನು ಮುಗಿಸಬೇಕು.. ಈಗ ದೇವರಿಗೆ ಅನ್ನವನ್ನು ಅರ್ಪಿಸಿ, ಪೂಜೆಯಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳನ್ನು ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಬೇಕು.. ಇದರ ನಂತರ ಭಗವಾನ್ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ ಮತ್ತು ಉಪವಾಸವನ್ನು ಪ್ರಾರಂಭಿಸಬೇಕು.. ಉಪವಾಸದ ಸಮಯದಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು..
ಇದನ್ನೂ ಓದಿ; ನಿಯಂತ್ರಣ ತಪ್ಪಿದ ಗೃಹ ಸಚಿವ ಅಮಿತ್ ಶಾ ಇದ್ದ ಹೆಲಿಕಾಪ್ಟರ್