ನಾಪತ್ತೆಯಾಗಿದ್ದ ಮಹಿಳೆ ಪಾಳುಬಾವಿಯಲ್ಲಿ ಜೀವಂತ ಪತ್ತೆ!
ಗದಗ(GADAG); ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಪಾಳುಬಿದ್ದ ಬಾವಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ.. ಆಕೆ ಯಾಕೆ ಬಾವಿಗೆ ಬಿದ್ದಿದ್ದಳು, ಯಾರು ಬೀಳಿಸಿದರು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.. ಆ ಮಹಿಳೆ ಹೇಳಿಕೆ ಅಚ್ಚರಿ ತರಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..
ಇದನ್ನೂ ಓದಿ; ಅಚ್ಚರಿ ಹಾಗೂ ಅನುಮಾನದ ಬೆಳವಣಿಗೆ; ಮುಡಾ ಮಾಜಿ ಆಯುಕ್ತರಿಗೆ ದೊಡ್ಡ ಉಡುಗೊರೆ!
ಗದಗ ಜಿಲ್ಲೆ ತೋಟಗಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಆಗಸ್ಟ್ 20ರಂದು ಬೆಳಗಿನ ಜಾಲ ಈ ಮಹಿಳೆ ಮನೆಯ ಅಂಗಳದಲ್ಲಿ ಕಸ ಗುಡಿಸುತ್ತಿದ್ದಳು.. ಈ ವೇಳೆ ಅಪರಿಚಿತ ಹೆಂಗಸೊಬ್ಬಳು ಏಕಾಏಕಿ ಅಲ್ಲಿಗೆ ನುಗ್ಗಿದ್ದಾಳೆ.. ಮಹಿಳೆಯ ಕುತ್ತಿಗೆ ಹಿಡಿದು ತನ್ನ ಜೊತೆ ಬರುವಂತೆ ಬಲವಂತ ಮಾಡಿದ್ದಾಳೆ.. ನಿನಗೆ ಏನು ಬೇಕು ಹೇಳು ಕೊಡುತ್ತೇನೆ ಎಂದರೆ ನನಗೆ ನೀನೇ ಬೇಕು ಎಂದು ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾಳೆ.. ಸ್ವಲ್ಪ ದೂರ ಹೋದ ಮೇಲೆ ನಿನ್ನ ತಾಳಿ ಕೊಡು ಎಂದು ಕೇಳಿದ್ದಾಳೆ.. ಅದನ್ನು ಕೊಡದಿದ್ದಕ್ಕೆ ಬಾವಿಗೆ ನೂಕಿ ಹೋಗಿದ್ದಾಳೆ.. ಹೀಗಂತ ಬಾವಿಯಲ್ಲಿ ಸಿಕ್ಕ ಮಹಿಳೆ ಹೇಳಿಕೊಂಡಿದ್ದಾಳೆ.. ಆದ್ರೆ ಆಕೆಯ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ..
ಈ ಮಹಿಳೆಗೆ ಮದುವೆಯಾಗಿ ಇನ್ನೂ ಆರು ತಿಂಗಳಷ್ಟೇ ಆಗಿದೆ.. ಅಷ್ಟರಲ್ಲೇ ಈ ರೀತಿ ಆಗಿದೆ.. ಆಗಂತುಕಿ ಮಹಿಳೆ ನನ್ನನ್ನು ಬಾವಿಗೆ ನೂಕಿದ್ದರಿಂದ ಪ್ರಜ್ಞೆ ತಪ್ಪಿದ್ದೆ.. ಮರುದಿನ ಎಚ್ಚರವಾಯಿತು.. ನಾನು ರಕ್ಷಣೆಗಾಗಿ ಕೂಗಿಕೊಂಡರೂ ಯಾರೂ ಬರಲಿಲ್ಲ.. ಅದು ನಿರ್ಜನ ಪ್ರದೇಶವಾದ್ದರಿಂದ ಯಾರಿಗೂ ಕೇಳಿಸಿಲ್ಲ.. ಎರಡು ದಿನ ಕಳೆದ ಮೇಲೆ ನನ್ನ ಅಳು ಕೇಳಿ ಸ್ಥಳೀಯರು ಬಂದು ನನ್ನನ್ನು ರಕ್ಷಣೆ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ.. ಆಕೆಯನ್ನು ಈಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ..
ಇದನ್ನೂ ಓದಿ; ಅಂಗಡಿ ಮುಂದೆ ನಿಂತಿದ್ದ ಕಾರ್ಮಿಕನ ಕತ್ತು ಕುಯ್ದ ಅಪರಿಚಿತ!
ಒಂದು ಕಡೆ ಮಹಿಳೆ ಹೇಳುತ್ತಿರುವುದು ನಿಜವೋ ಸುಳ್ಳೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.. ಇನ್ನೊಂದು ಕಡೆ ಇದೇನಾದರೂ ಭೂತಚೇಷ್ಟೆಯೇ ಎಂದು ಕೆಲವರು ಮಾತನಾಡತೊಡಗಿದ್ದಾರೆ..