ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್..!ಶಿಕ್ಷಣ ಸಚಿವರು ಹೇಳಿದ್ದೇನು..?
ಬೆಂಗಳೂರು: ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್ ಹಾಕಲಾಗಿದೆ ಎಂಬ ಸುದ್ದಿ ಹರಿದಾಡ್ತಿದೆ. ಕೇವಲ ರಾಜನಾಗಿ ಟಿಪ್ಪುವಿನ ಇತಿಹಾಸ ಪಠ್ಯದಲ್ಲಿ ಮುಂದುವರಿಸಲು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ತೀರ್ಮಾನ ಮಾಡಲಾಗಿದೆ. ಟಿಪ್ಪುವಿನ ಬಗ್ಗೆ ಹೆಚ್ಚು ವೈಭವದ ಮಾಹಿತಿಗೆ ಕತ್ತರಿ ಹಾಕಲಾಗಿದೆ ಈ ಬಗ್ಗೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟಿಪ್ಪು ಸುಲ್ತಾನ್ ಇತಿಹಾಸ ಪಠ್ಯದಿಂದ ಕೈ ಬಿಡುವ ವಿಚಾರ ಸತ್ಯಕ್ಕೆ ದೂರವಾದ ಮಾತು. ಇತಿಹಾಸದ ಕೆಲ ವಿಚಾರಗಳು ಪಠ್ಯ ಪುಸ್ತಕದಲ್ಲಿ ಕಡೆಗಣನೆ ಆಗಿವೆ. ಕಡೆಗಣಿಸಿದ ವಿಷಯವನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ. ಇತಿಹಾಸವನ್ನು ತಿರುಚಲು ಯತ್ನಿಸಿದ್ದನ್ನು ಸರಿಪಡಿಸುತ್ತೇವೆ ಹೊರತು ಪಠ್ಯದಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.