Districts

ಮುಸ್ಲಿಂ ಜನಾಂಗ ಒಂದು ಮನೆಯೂ ಇಲ್ಲ..ಆದರೂ ಅವರ ಹೆಸರಲ್ಲಿ ಜಾಗ ಇದೆ: ಸ್ಮಶಾನ ಜಾಗಕ್ಕಾಗಿ ಹೋರಾಟ

ಮಂಡ್ಯ: ನಮ್ಮದು ಭಾತೃತ್ವ ದೇಶ..ಇಲ್ಲಿ ಹಲವಾರು ಧರ್ಮ, ಜಾತಿಗಳು ಇವೆ. ಪ್ರತಿಯೊಂದು ಗ್ರಾಮದಲ್ಲಿ ನಾನಾ ಧರ್ಮ, ಜಾರಿಗೆ ಸೇರಿದ ಜನ ವಾಸ ಮಾಡ್ತಾರೆ ಅವರಿಗಾಗಿ ಅವರದ್ದೇ ಆದ ಸ್ಮಶಾನ ಭೂಮಿ ಕೂಡ ಇರುತ್ತೆ. ಆದರೆ ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ ಆದರೂ ಒಂದು ಎಕರೆ ಜಮೀನನ್ನು ಖಬರಸ್ಥಾನಕ್ಕೆ ಕಾಯ್ದಿರಿಸಲಾಗಿದೆ. ಇದೀಗ ಊರಿಗೆ ಸ್ಮಶಾನವಿಲ್ಲ ಈ ಜಾಗವನ್ನು ಬಿಟ್ಟಕೊಡಬೇಕೆಂದು ಊರಿನ ಜನ ಪಟ್ಟು ಹಿಡಿದಿದ್ದಾರೆ.

ಹೌದು ಮಂಡ್ಯದ ಹೊಸ ಬೂದನೂರು ಗ್ರಾಮದಲ್ಲಿ ಸುಮಾರು ಐದು ಸಾವಿರ ಜನ ವಾಸ ಮಾಡ್ತಾರೆ. ಅದರಲ್ಲಿ ಒಬ್ಬರು ಸಹ ಮುಸ್ಲಿಂ ಜನಾಂಗ ಇಲ್ಲ, ಆದರೂ ಅವರಿಗಾಗಿ ಮಕಾನ್‌ ಎಂದು ಭೂಮಿಯನ್ನು ನೀಡಲಾಗಿದೆ. ಇದೀಗ ಊರಿನಲ್ಲಿ ಹಿಂದೂಗಳಿಹೆ ಸ್ಮಶಾನವಿಲ್ಲದೆ ಪರದಾಡುವಂತಾಗಿದೆ. ಭೂಮಿ ಇದೆ ಆದರೆ ಜನ ಇಲ್ಲ…ಇತ್ತ ಜನ ಇದ್ದಾರೆ ಸ್ಮಶಾನಕ್ಕಾಗಿ ಭೂಮಿ ಇಲ್ಲ ಹಾಗಾಗಿ ಆ ಭೂಮಿಯನ್ನು ಮರುಖಾತೆ ಮಾಡಿಕೊಡುವಂತೆ ಊರಿನ ಜನ ಹೋರಾಟ ಮಾಡ್ತಿದಾರೆ.

2017ರಲ್ಲಿ ಕರ್ನಾಟಕ ವಕ್ಫ್ ಮಂಡಳಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಬೂದನೂರಿನ ಸರ್ವೆ ನಂ. 313ರಲ್ಲಿ ಇರುವ 1 ಎಕರೆ ಜಾಗ ಇದಾಗಿದೆ. ಆಗಿನ ಜಿಲ್ಲಾಧಿಕಾರಿ ಜಿಯಾ ಉಲ್ಲಾ ಚಿತಾವಣೆಯವರು ಮಕಾನ್‌ ಎಂದು ಖಾತೆ ಮಅಡಿರುವುದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಈ ಜಾಗಕ್ಕಾಗಿ ಊರಿನವರು ಪಾದಯಾತ್ರೆ ಕೂಡ ಮಾಡಿದ್ದಾರಂತೆ. ಆದರೂ ಯಾರೂ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇಲ್ಲದವರಿಗಾಗಿ ಜಾಗ ಇಡುವುದು ಎಷ್ಟು ಮಾತ್ರ ಸರಿ ನಮಗೆ ಅಂತ್ಯಸಂಸ್ಕಾರ ಮಾಡಲು ಭೂಮಿಯಿಲ್ಲ.ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಅಂತ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

Share Post