ಕೊನೆಗೂ ಮನವೊಲಿಕೆಗೆ ಮಣಿದ ವಿದ್ಯಾರ್ಥಿನಿಯರು
ಕಲಬುರಗಿ: ಕೋರ್ಟ್ ಆದೇಶವಿದ್ದರೂ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಕೊನೆಗೂ ಮನವೊಲಿಕೆಗೆ ಮಣಿದಿದ್ದಾರೆ. ಶಿಕ್ಷಕರ ಮನವೊಲಿಕೆ ಮಣಿದ ವಿದ್ಯಾರ್ಥಿನಿಯರು, ಹಿಜಾಬ್ ಕಳಚಿದ್ದಾರೆ. ಜೇವರ್ಗಿ ಕಾಲೋನಿಯಲ್ಲಿ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ಇಂದು ಕಿರು ಪರೀಕ್ಷೆ ನಡೆಯುತ್ತಿತ್ತು. ಎಲ್ಲಾ ವಿದ್ಯಾರ್ಥಿನಿಯರು ಹಿಜಾಬ್ ತೆಗೆದುಬಂದಿದ್ದರು. ಆದ್ರೆ, ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಿ ಬಂದಿದ್ದರು. ಹಿಜಾಬ್ ಧರಿಸಿಯೇ ಟೆಸ್ಟ್ ಬರೆಯುವುದಾಗಿ ಪಟ್ಟು ಹಿಡಿದಿದ್ದರು. ಆದ್ರೆ, ಕೋರ್ಟ್ ಆದೇಶದ ಬಗ್ಗೆ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಡಲಾಯಿತು. ಅನಂತರ ಶಿಕ್ಷಕಕ ಮನವೊಲಿಕೆಗೆ ಮಣಿದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಿರು ಪರೀಕ್ಷೆ ಬರೆದರು.