ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದ ಆನೆ; ಮುಂದೇನಾಯ್ತು..?
ಹಾಸನ; ಕಾಡು ಪ್ರದೇಶದ ನಡುವೆ ಹಾದುಹೋಗಿರುವ ರಸ್ತೆಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿರುತ್ತದೆ. ಅದರಲ್ಲೂ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಆನೆಗಳು ಜನರಿಗೆ ಕಾಟ ಕೊಡುತ್ತಲೇ ಇರುತ್ತವೆ. ಅದರಲ್ಲೂ ಈ ಬಾರಿ ಆನೆಯೊಂದು ಚಲಿಸುತ್ತಿದ್ದ ಕಾರೊಂದನ್ನು ಅಡ್ಡಗಟ್ಟಿ, ಅದರೊಳಗಿದ್ದ ಬಾಲಕಿಯನ್ನು ಸೊಂಡಲಿನಿಂದ ಹೊರಗೆಳೆದಿದೆ. ಕೆಳಗೆ ಹಾಕಿ ಆಕೆಯನ್ನು ಗಾಯಗೊಳಿಸಿದೆ.
ಹದಿನಾರು ವರ್ಷದ ಬಾಲಕಿ ದೀಕ್ಷಿತಾ ಗಾಯಗೊಂಡು ಬಾಲಕಿಯಾಗಿದ್ದಾಳೆ. ದೀಕ್ಷಿತಾ ಚಿಕ್ಕಮಗಳೂರಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ರಜೆ ಇದ್ದ ಕಾರಣ ತನ್ನ ಸ್ವಗ್ರಾಮ ಹಳೆಬಾಗೆಗೆ ಬಂದಿದ್ದಳು. ತನ್ನ ಪೋಷಕರ ಜೊತೆ ಮಾರುತಿ ೮೦೦ ಕಾರಿನಲ್ಲಿ ತನ್ನ ಅಜ್ಜಿಯ ಊರು ಹೊಸಕೆರೆಗೆ ಹೋಗಿ ಮತ್ತ ತನ್ನೂರಿಗೆ ವಾಪಸ್ಸಾಗುತ್ತಿದ್ದಳು. ಈ ವೇಳೆ ಆನೆ ದಾಳಿ ಮಾಡಿದೆ.
ಅಜ್ಜಿ ಊರಿನಿಂದ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಏಕಾಏಕಿ ಆನೆ ಅಡ್ಡ ಬಂದಿದೆ. ಈ ವೇಳೆ ದೀಕ್ಷಿತಾ ಅವರ ಕುಟುಂಬದ ವೀನೋದ ಹಾಗೂ ಗಿರೀಶ್ ಅವರು ಕಾರು ನಿಲ್ಲಿಸಿ ಅಲ್ಲಿಂದ ಓಡಿದ್ದಾರೆ. ಆದ್ರೆ ದೀಕ್ಷಿತಾ ಮಾತ್ರ ಕೆಳಗಿಳಿಯಲಾಗದೇ ಕಾರಿನಲ್ಲೇ ಕುಳಿತಿದ್ದಾಳೆ. ಆಕೆಯನ್ನು ಸೊಂಡಿಲಿನಿಂದ ಹೊರಗೆಳೆದ ಆನೆ ಕಾಲಿನಿಂದ ತುಳಿದು ಗಾಯಗೊಳಿಸಿದೆ. ಈ ವೇಳೆ ದೀಕ್ಷಿತಾ ಜೋರಾಗಿ ಕಿರುಚಿಕೊಂಡಿದ್ದು, ಆನೆ ಆಕೆಯನ್ನು ಅಲ್ಲೇ ಬಿಟ್ಟು ಕಾಫಿ ತೋಟದೊಳಗೆ ಹೋಗಿದೆ.
ನಂತರ ದೀಕ್ಷಿತಾಗೆ ಸಕಲೇಶಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.