Districts

ಹಿಜಾಬ್‌ ಧರಿಸಿ ಕಲಾಪಕ್ಕೆ ಆಗಮಿಸಿದ ಶಾಸಕಿ

ಬೆಂಗಳೂರು : ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಆಗಿರುವ ಖನೀಜಾ ಫಾತಿಮಾ ಅವರು ಹಿಜಬ್‌ ಧರಿಸಿಯೇ ಕಲಾಪಕ್ಕೆ ಆಗಮಿಸಿದ್ದಾರೆ.

ಹಿಜಬ್‌ ಧರಿಸುವುದು ಮುಸ್ಲಿಂ ಹೆಣ್ಣು ಮಕ್ಕಳ ಸಂಪ್ರದಾಯ ಹಾಗು ಹಕ್ಕು. ನಾನು ಹಿಜಬ್‌ ಧರಿಸಿಯೇ ವಿಧಾನಸೌಧಕ್ಕೆ ಹೋಗುತ್ತೇನೆ. ಧೈರ್ಯ ಇದ್ದರೆ ತಡೆಯಲಿ ಎಂದು ಸವಾಲಾಕಿದ್ದ ಖನೀಜಾ ಫಾತಿಮಾ ಇಂದು ಅದೇ ರೀತಿ ನಡೆದುಕೊಂಡಿದ್ದಾರೆ. ಹಿಂದಿನ ಕಲಾಪಗಳಲ್ಲಿಯೂ ಖನೀಜಾ ಫಾತಿಮಾ ಹಿಜಬ್‌ ಧರಿಸಿಯೇ ಪಾಲ್ಗೊಳ್ಳುತ್ತಿದ್ದರು.

ಹಿಜಬ್‌ ವಿವಾದ ಸದ್ಯಕ್ಕೆ ಅಂತ್ಯಗೊಳ್ಳುವಂತೆ ಕಾಣ್ತಿಲ್ಲ. ಎಲ್ಲರೂ ಸಮವಸ್ತ್ರ ಧರಿಸಿ ಶಾಲೆಗೆ ಬರುವಂತೆ ಹೈಕೋರ್ಟ್‌ ಆದೇಶ ನೀಡಿತ್ತು. ಈಗ ಶಾಲೆಗಳು ಮತ್ತೆ ಶುರುವಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳನ್ನು ಹಿಜಬ್‌ ಧರಿಸಿಯೇ ಬರುತ್ತಿದ್ದಾರೆ.

Share Post