HIJAB: ಸರ್ಕಾರದಿಂದಲೇ ಕೋಮು ಸಂಘರ್ಷ ಸೃಷ್ಟಿ; ಬಸವರಾಜರಾಯರೆಡ್ಡಿ ಆರೋಪ
ಕಲಬುರಗಿ: ಸರ್ಕಾರದ ವೈಫಲ್ಯ ಮುಚ್ಚಿಡುವುದಕ್ಕಾಗಿ ಸರ್ಕಾರದಿಂದಲೇ ಕೋಮು ಸಂಘರ್ಷ ಸೃಷ್ಟ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ (Basavarajarayareddy) ಗಂಭೀರ ಆರೋಪ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿವಾದ ಅನಗತ್ಯ ಸೃಷ್ಟಿ ಅಷ್ಟೇ. ಅನಗತ್ಯವಾಗಿ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿರುವ ಇಂತಹ ಸಂದರ್ಭದಲ್ಲಿ ಶಾಲೆಗಳಲ್ಲಿ ಕಾಮು ಸಾಮರಸ್ಯ ಕದಡುಲಾಗುತ್ತಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ ಎಂದ ಬಸವರಾಜ ರಾಯರೆಡ್ಡಿ, ಸಂಸದ ಪ್ರತಾಪ ಸಿಂಹ ಹೇಳಿದಾಕ್ಷಣ ಪಾಕಿಸ್ತಾನಕ್ಕೆ ಹೋಗೋದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.