Districts

ಪ್ರಿಯಾಂಕಾ ಗಾಂಧಿ ಹಿಜಾಬ್ ಟ್ವೀಟ್‌ಗೆ ಪ್ರಮೋದ್‌ ಮುತಾಲಿಕ್‌ ಕಿಡಿ

ಧಾರವಾಡ: ಕಾಲೇಜಿನಲಿ ವಿದ್ಯಾರ್ಥಿನಿಯರು ಇಷ್ಟ ಬಂದ ಸಮವಸ್ತ್ರ ಧರಿಸಲು ಸಂವಿಧಾನದಲ್ಲೇ ಅವಕಾಶವಿದೆ. ಅವರು ಬಿಕಿನಿ ಆದ್ರೂ ಹಾಕಲಿ, ಜೀನ್ಸ್‌ ಆದರೂ ಹಾಕಲಿ ನೀವು ಕಿಚ್ಚು ಹೊತ್ತಿಸಬೇಡಿ ಎಂಬ ಪ್ರಿಯಾಂಕಾ ಗಾಂಧಿ ಟ್ವೀಟ್‌ಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಕಿಡಿ ಕಾರಿದ್ದಾರೆ. ಪ್ರಿಯಾಂಕಾ ಗಾಂಧಿಯವರಿಗೆ ನಾಚಿಕೆಯಾಗಬೇಕು, ಶಾಲೆಗಳಲ್ಲಿ ಬಿಕಿನಿ ಹಾಕಲು ಅವಕಾಶ ಮಾಡಿಕೊಡ್ತೀರಾ..?ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದರಿಂದ ಸಮಾನತೆ ಇರುತ್ತದೆ. ನಿಮ್ಮ ಅಜ್ಜಿ ಇಂದಿರಾ ಗಾಂಧಿಯವರೇ ಸಮವಸ್ತ್ರ ಸಂಹಿತೆ ಜಾರಿಗೆ ತಂದವರು ಇಂತಹ ಬೆಳವಣಿಗೆ ಸರಿಯಲ್ಲ ಎಂದು ಪ್ರಮೋದ್‌ ಮುತಾಲಿಕ್‌ ತಿರುಗೇಟು ನೀಡಿದ್ದಾರೆ.

ಇನ್ನೂ ಮಂಡ್ಯದಲ್ಲಿ ಯುವತಿಗೆ 5ಲಕ್ಷ ಬಹುಮಾನ ನೀಡುವ ವಿಚಾರ ಕುರಿತು ಮಾತನಾಡಿದ ಮುತಾಲಿಕ್‌ ಜೈ ಶ್ರೀರಾಮ್‌ ಎನ್ನುವವರಿಗೆ ಬಹುಮಾನ ಕೊಡಲು ಮುಂದಾಗಿದ್ದಾರೆ ಇಸ್ಲಾಂ ಪ್ರವೃತ್ತಿ ಆತಿಕ್ರಮಣ, ಇಡೀ ಜಗತ್ತೇ ಇದನ್ನು ಹೇಳುತ್ತಿದೆ ಇದ್ಯಾವುದೂ ದೇಶಕ್ಕೆ ಒಳ್ಳೆಯದಲ್ಲ ಎಂದು ಧಾರವಾಡದಲ್ಲಿ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

Share Post