NAXAL; ಉಡುಪಿ, ಚಿಕ್ಕಮಗಳೂರು ಮತ್ತೆ ನಕ್ಸಲ್ ಚಟುವಟಿಕೆ ಶುರು; ಯಾರು ಈ ವಿಕ್ರಮ್ ಗೌಡ..?
ಚಿಕ್ಕಮಗಳೂರು; ದಶಕಗಳ ಹಿಂದೆ ಉಡುಪಿ (UDUPI) ಹಾಗೂ ಚಿಕ್ಕಮಗಳೂರು (CHIKKAMAGALUR) ಭಾಗದಲ್ಲಿ ನಕ್ಸಲ್ (NAXAL) ಚಟುವಟಿಕೆ ಕಾರ್ಯನಿರತವಾಗಿತ್ತು. ಅಲ್ಲಿನ ದಟ್ಟಕಾಡುಗಳಲ್ಲಿ ಅಡಗಿರುತ್ತಿದೆ ನಕ್ಸಲರು ಆಗಾಗ ಅಲ್ಲಲ್ಲಿ ದಾಳಿಗಳನ್ನು ಮಾಡಿದ್ದೂ ಇದೆ. ಆದ್ರೆ 2005ರಲ್ಲಿ ನಡೆದ ಕೆಲ ಪೊಲೀಸ್ ಎನ್‌ಕೌಂಟರ್‌ಗಳ ನಂತರ ನಕ್ಸಲ್ ಚಟುವಟಿಕೆ ಬಹುತೇಕ ನಿಂತುಹೋಗಿತ್ತು. ಆದ್ರೆ ಇದೀಗ ಮತ್ತೆ ಈ ಭಾಗದಲ್ಲಿ ನಕ್ಸಲರು ಕಾರ್ಯನಿರತರಾಗಿದ್ದಾರೆ. ಮೂವರು ನಕ್ಸಲರು ಇತ್ತೀಚೆಗೆ ಶಸ್ತಾಸ್ತ್ರಗಳೊಂದಿಗೆ ಬೈಂದೂರಿಗೆ ಬಂದು ಹೀಗಿದ್ದಾರೆ. ಬೈಂದೂರಿನ ಹಲವು ಮನೆಗಳಿಗೆ ಭೇಟಿ ಕೊಟ್ಟು ಹೋಗಿದ್ದಾರೆ ಎಂಬ ಮಾಹಿತಿಗಳು ಪೊಲೀಸ್ ಮೂಲಗಳು ಲಭ್ಯವಾಗಿದೆ.
ಅಲರ್ಟ್ ಆದ ನಕ್ಸಲ್ ನಿಗ್ರಹ ಪಡೆ
ಕೇರಳದಿಂದ ನಕ್ಸಲರು ಇಲ್ಲಿಗೆ ಆಗಮಿಸಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತಮ್ಮ ಚಟುವಟಿಕೆಗಳನ್ನು ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಫುಲ್ ಅಲರ್ಟ್ ಆಗಿದೆ. ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಶುರು ಮಾಡಲು ಮುಂದಾಗಿದ್ದಾರೆ. ಗ್ರಾಮಗಳಲ್ಲಿ ಮೊಕ್ಕಾಂ ಹೂಡಿದ್ದು, ನಕ್ಸಲ್ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಕೇರಳದಲ್ಲಿ ನಕ್ಸಲ್ ಚಟುವಟಿಕೆಗಳು ಈಗಲೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿಂದ ನಕ್ಸಲರು ಬಂದಿರುವ ಸಾಧ್ಯತೆ ಇದ್ದು, ಹೆಚ್ಚಿನ ಶಸ್ತ್ರಾಸ್ತ್ರಗಳನ್ನೂ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ, ನಕ್ಸಲರನ್ನು ಹತ್ತಿಕ್ಕಲು ತೀವ್ರ ಕಟ್ಟೆಚ್ಚರ ವಹಿಸಿದೆ.
ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ (Naxal vikarm Gowda)
ವಿಕ್ರಮ್ ಗೌಡ ಎಂಬ ನಕ್ಸಲನ ನೇತೃತ್ವದಲ್ಲಿ ನಕ್ಸಲರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಕ್ರಮ್ ಗೌಡ ಉಡುಪಿ ಜಿಲ್ಲೆ ಹೆಬ್ರಿ ಮೂಲದವನು. ಈ ಹಿನ್ನೆಲೆಯಲ್ಲಿ ಆ ಭಾಗದ ಪರಿಚಯ ಆತನಿಗೆ ಚೆನ್ನಾಗಿದೆ. ಈ ಸುತ್ತಮುತ್ತಲ ಕಾಡಿನಲ್ಲೇ ಇದ್ದುಕೊಂಡು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಮಾಹಿತಿ. ಪೊಲೀಸರಿಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮಗಳ ಸುತ್ತಮುತ್ತ ನಕ್ಸಲರು ಓಡಾಡ ನಡೆಸಿದ್ದಾರೆ.
ಬಿ.ಜಿ.ಕೃಷ್ಣಮೂರ್ತಿ ನಂತರ ವಿಕ್ರಮ್ ಗೌಡ ನಾಯಕತ್ವ (B.G.Krishnamurthy)
ವಿಕ್ರಂ ಗೌಡ ಉಡುಪಿ ಮೂಲದವನಾದರೂ ಕೇರಳದಲ್ಲಿ ತನ್ನ ಚಟುವಟಿಕೆ ನಡೆಸುತ್ತಿದ್ದ. ಕರ್ನಾಟಕದಲ್ಲಿ ಬಿ.ಜಿ.ಕೃಷ್ಣಮೂರ್ತಿ ಎಂಬ ನಕ್ಸಲ್ ನೇತೃತ್ವದಲ್ಲಿ ಚಟುವಟಿಕೆ ನಡೆಯುತ್ತಿತ್ತು. ಆತನ ನಂತರ ವಿಕ್ರಂಗೌಡ ಕರ್ನಾಟಕದ ನೇತೃತ್ವ ವಹಿಸಿಕೊಂಡಿದ್ದಾನೆ ಎನ್ನಲಾಗ್ತಿದೆ. ಹೀಗಾಗಿ ಆತ ಕರ್ನಾಟಕದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚುರುಕುಗೊಳಿಸೋ ಪ್ರಯತ್ನ ಮಾಡ್ತದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸಾಕೇತ್ ರಾಜನ್ ಹುತಾತ್ಮ ದಿನ ಆಚರಣೆಗೆ ಸಿದ್ಧತೆ
2003ರಿಂದ ಉಡುಪಿ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ್ ಎನ್‌ಕೌಂಟರ್‌ಗಳು ನಡೆದಿದ್ದವು. ಅದರಲ್ಲಿ ಹಲವು ಪ್ರಮುಖ ನಕ್ಸಲರು ಸಾವಿಗೀಡಾಗಿದ್ದರು. ಹೀಗಾಗಿ ಈ ಭಾಗದಲ್ಲಿ 2008ರ ನಂತರ ನಕ್ಸಲ್ ಚಟುವಟಿಕೆ ಬಹುತೇಕ ನಿಂತೇ ಹೋಗಿತ್ತು. 2005ರ ಫೆಬ್ರವರಿ 5 ರಂದು ಕಳಸ ತಾಲೂಕಿನ ಮೆಣಸಿನ ಹಾಡ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ಸಾಕೇತ್ ರಾಜನ್ ಸಾವಿಗೀಡಾಗಿದ್ದ. ಆತನ ಸಾವಿಗೆ ರೆಡ್ ಸೆಲ್ಯೂಟ್ ದಿನ ಆಚರಿಸಲು ನಕ್ಸಲರು ತಯಾರಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ 2003ರ ನವೆಂಬರ್ 17ರಂದು ಹಾಜಿಮಾ ಮತ್ತು ಪಾರ್ವತಿ ಎಂಬಿಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಇದಾದ ಮೇಲೆ 2005ರ ಫೆಬ್ರವರಿ 6ರಂದು ಕೂಡಾ ಎನ್‌ಕೌಂಟರ್ ನಡೆದಿತ್ತು. ಅನಂತರ 2005ರ ಫೆಬ್ರವರಿ 10ರಂದು ತುಮಕೂರು ಜಿಲ್ಲೆ ಪಾವಗಡ ಬಳಿ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ದಾಳಿ ಮಾಡಿ ಆರು ಪೊಲೀಸರು ಹಾಗೂ ಒಬ್ಬ ವ್ಯಕ್ತಿಯ ಸಾವಿಗೆ ಕಾರಣರಾಗಿದ್ದರು. ಅನಂತರ 2008ರಲ್ಲಿ ಹೊರನಾಡು ಬಳಿ ಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದ