DistrictsPolitics

ಪ್ರಧಾನಿ ಮೋದಿ ಗೋ ಬ್ಯಾಕ್ ಅಭಿಯಾನ ಆರಂಭ

ಹುಬ್ಬಳ್ಳಿ; ವಿಧಾನ ಸಭಾ ಚುನಾವಣೆ ಹತ್ತಿರವಿರುವ ಹಿನ್ನೆಲೆ ಕೇಂದ್ರ ಬಿಜೆಪಿ ನಾಯಕರ ರಾಜ್ಯ ಪ್ರವಾಸ ಮುಂದುವರೆದಿದೆ. ಅಮಿತ್ ಶಾ, ಜೆಪಿ ನಡ್ಡಾ ಎರಡು ದಿನಗಳ ಪ್ರವಾಸ ಮುಗಿಸಿ ತೆರಳಿದ್ದಾರೆ. ಇದರ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ.

ಜ.12 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಜನವರಿ 12 ರಿಂದ 16 ವರೆಗೆ ನಾಲ್ಕು ದಿನಗಳ ಕಾಲ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ನಗರದ ರೈಲ್ವೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ‌.

ಪ್ರಧಾನಿ ಆಗಮನಕ್ಕೆ ಕಾಂಗ್ರೇಸ್ ಮುಖಂಡರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದು ಗೋ ಬ್ಯಾಕ್ ಅಭಿಯಾನ ಆರಂಬಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಈ ಅಭಿಯಾನವನ್ನ ಆರಂಭಿಸಿದ್ದಾರೆ. ಮೋದಿ ಆಗಮನಕ್ಕೂ ಮುನ್ನವೇ ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಗೊ ಬ್ಯಾಕ್ ಹ್ಯಾಶ್ ಟ್ಯಾಗ್ ಅಭಿಯಾನ ಪ್ರಾರಂಭವಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಿದ ವ್ಯಾಪಾರಿ ಮೊದಿಗೆ ಸ್ವಾಗತಿಸಬೇಕಾ, ಬಿಆರ್ಟಿಎಸ್ ತಂದು ಸಾವಿರಾರು ಜನರ ಉದ್ಯೋಗ ಕಸಿದುಕೊಂಡ ಮೋದಿ ನೂರಾರು ಅಮಾಯಕ ಜನರ ಬಲಿ ಪಡೆದಿದ್ದಾರೆ, ಸ್ವದೇಶಿ ಉತ್ಪನ್ನವಾದ ಖಾದಿ ತ್ರಿವರ್ಣ ರಾಷ್ಟ್ರ ಧ್ವಜವನ್ನ ಮೂಲೆಗುಂಪು ಮಾಡಿ ಚೈನಾದ ಪಾಲಿಸ್ಟರ್ ಧ್ವಜ ತಂದ ಮೋದಿಗೆ ನಾವು ಸ್ವಾಗತಿಸಬೇಕಾ ಎಂದು ಮುಖಂಡರು ಕಿಡಿಕಾರಿದ್ದಾರೆ.

Share Post