16 ವರ್ಷದ ಅಪ್ರಾಪ್ತನ ಜೊತೆ 28 ವರ್ಷದ ವಿವಾಹಿತ ಮಹಿಳೆ ಎಸ್ಕೇಪ್!
ವಿಜಯಪುರ; ಹದಿನಾರು ವರ್ಷದ ಅಪ್ರಾಪ್ತ ಬಾಲಕನ ಜೊತೆ 28 ವರ್ಷದ ಮಹಿಳೆ ಓಡಿಹೋಗಿದ್ದಾಳೆ.. ವಿವಾಹಿತ ಮಳೆ 16 ವರ್ಷ ಬಾಲಕನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾಳೆ ಎಂದು ಆರೋಪಿಸಲಾಗಿದೆ.. ಬಾಲಕನ ತಾಯಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ..
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.. ಖಾಸಗಿ ಫ್ಯಾಕ್ಟರಿಯಲ್ಲಿ ವಿವಾಹಿತ ಮಹಿಳೆ ಕೆಲಸ ಮಾಡುತ್ತಿದ್ದು, ಇದೇ ವೇಳೆಯಲ್ಲಿ 16 ವರ್ಷದ ಬಾಲಕ ಆಕೆಗೆ ಪರಿಚಯವಾಗಿದ್ದನಂತೆ.. ಪರಿಚಯ ಇಬ್ಬರು ಮಧ್ಯೆ ಪ್ರೀತಿಯಾಗಿ ಮಾರ್ಪಟ್ಟಿದೆ.. ಮಹಿಳೆಗೆ ನಾಲ್ಕು ವರ್ಷದ ಮಗು ಕೂಡಾ ಇದೆ.. ಆದರೂ ಕೂಡಾ ಆಕೆ ಗಂಡ, ಮಗುವನ್ನು ಬಿಟ್ಟು 16 ವರ್ಷದ ಬಾಲಕನ ಜೊತೆ ಓಡಿಹೋಗಿದ್ದಾಳೆ..
ನನ್ನ ಮಗನಿಗೆ ಮರುಳು ಮಾತು ಹೇಳಿ ಕರೆದುಕೊಂಡು ಹೋಗಿದ್ದಾಳೆ.. ಕೂಡಲೇ ಆಕೆಯನ್ನು ಬಂಧಿಸಬೇಕೆಂದು ಬಾಲಕನ ತಾಯಿ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ..