ಹಾಸನದಲ್ಲಿ ಮಳೆಯ ಅವಾಂತರ; ಕುಸಿದ ಫ್ಲೈಓವರ್ ಸ್ಲ್ಯಾಬ್, ಮಣ್ಣು
ಹಾಸನ; ಹಾಸನದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಭಾರಿ ಮಳೆಯ ಕಾರಣದಿಂದಾಗಿ ಹಾಸನ-ಮೈಸೂರು ಹೆದ್ದಾರಿ ಫ್ಲೈಓವರ್‌ಗೆ ಸಂಚಕಾರ ಬಂದಿದೆ. ಫ್ಲೈಓವರ್ ಸ್ಲ್ಯಾಬ್‌ಗಳು, ಮಣ್ಣು ಕುಸಿದಿದ್ದು, ಭೀತಿಗೆ ಕಾರಣವಾಗಿದೆ. ಹೊಳೆ ನರಸೀಪುರ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಎರಡು ವರ್ಷಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿ-373ರ ಹಂಗರಹಳ್ಳಿ ಬಳಿ ಈ ಫ್ಲೈಓವರ್ ನಿರ್ಮಾಣ ಮಾಡಲಾಗಿತ್ತು. ಆದ್ರೆ ತಳಪಾಯದ ಮಣ್ಣು ಹಾಗೂ ಸ್ಲ್ಯಾಬ್‌ಗಳು ಕುಸಿದಿವೆ. ಕಳಪೆ ಕಾಮಗಾರಿಯಿಂದಲೇ ಈ ರೀತಿಯ ಆಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ನಿರ್ಮಾಣ ಹಂತದಲ್ಲಿದ್ದಾಗಲೇ ಎರಡು ಬಾರಿ ಈ ರೀತಿ ಕುಸಿದಿತ್ತು. ಈಗ ಮತ್ತೆ ಕುಸಿದಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.