ಸ್ಯಾಂಟ್ರೋ ರವಿಗೆ 20 ವರ್ಷದಿಂದ ರಾಜಕಾರಣಿಗಳು ನಂಟು; ಸಿಎಂ ಬಾಂಬ್
ಮೈಸೂರು; ಸ್ಯಾಂಟ್ರೋ ರವಿ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಅವರು, ಸಿಎಂ ಆಗಿ ನಾನು ಹಲವರ ಬಳಿ ಮಾತನಾಡಿರುತ್ತೇನೆ. ಅವರ ಹಿನ್ನೆಲೆಯನ್ನೆಲ್ಲಾ ತಿಳಿದುಕೊಂಡು ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ 20 ವರ್ಷಗಳಿಂದ ಎಲ್ಲಾ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ನಂಟು ಇದೆ ಎಂದಿರುವ ಬೊಮ್ಮಾಯಿ, ವಿಪಕ್ಷ ನಾಯಕರ ಲಿಂಕ್ ಕುರಿತು ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ. ಸದ್ಯ ಡಿಜಿಟಲ್ ತಂತ್ರಜ್ಞಾನದಲ್ಲಿ ಯಾವ ರೀತಿ ಬೇಕಾದರೂ ಫೋಟೋ ಬಳಕೆ ಮಾಡಬಹುದು. ನಾವು ಆತನನ್ನ ಬಂಧಿಸಿ ಆತನ ಹೇಳಿಕೆ ಮೇಲೆ ಎಲ್ಲವನ್ನೂ ತನಿಖೆ ಮಾಡ್ತೀವಿ ಎಂದು ಸಿಎಂ ಹೇಳಿದ್ದಾರೆ. ಜೊತೆಗೆ 20 ವರ್ಷಗಳ ಎಲ್ಲಾ ಪ್ರಕರಣಗಳನ್ನ ತನಿಖೆ ನಡೆಸಲು ತಿಳಿಸಿದ್ದೇನೆ. ಮೈಸೂರು ಪೊಲೀಸ್ ಆಯುಕ್ತ ರಮೇಶ್ ಅವರಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.