EconomyNational

ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂಪಾಯಿ ಬಂಪರ್‌ ಲಾಟರಿ

ತಿರುವನಂತಪುರಂ; ಕೇರಳದಲ್ಲಿ ಲಾಟರಿ ಇನ್ನೂ ಚಾಲ್ತಿಯಲ್ಲಿದೆ. ಸರ್ಕಾರವೇ ನಡೆಸುವ ಲಾಟರಿ ಬಡವರು ಕೋಟಿ ಕೋಟಿ ಗೆದ್ದ ಸುದ್ದಿಗಳನ್ನು ನಾವು ಆಗಾಗ ಓದುತ್ತಿರುತ್ತೇವೆ. ಅದೇ ರೀತಿ ತಿರುವನಂತಪುರದ 11 ಪೌರಕಾರ್ಮಿಕರಿಗೂ ಬಂಪರ್‌ ಹೊಡೆದಿದೆ. ಹನ್ನೊಂದು ಪೌರಕಾರ್ಮಿಕ ಮಹಿಳೆಯರು, ಸ್ವಲ್ಪ ಸ್ವಲ್ಪ ಹಣ ಸೇರಿಸಿ ಆಗಾಗ ಲಾಟರಿ ಟಿಕೆಟ್‌ ಖರೀದಿ ಮಾಡುತ್ತಿದ್ದರು. ಆದ್ರೆ ಎಂದೂ ಲಾಟರಿ ಹೊಡೆದಿರಲಿಲ್ಲ. ಆದ್ರೆ ಇದೀಗ ಅವರು ಸಾಲ ಮಾಡಿ 250 ಮೌಲ್ಯದ ಲಾಟರಿ ಟಿಕೆಟ್‌ ಖರೀದಿ ಮಾಡಿದ್ದು, ಅದಕ್ಕೆ 10 ಕೋಟಿ ರೂಪಾಯಿ ಬಹುಮಾನ ಬಂದಿದೆ.

ನಾವು ಆಗಾಗ ಅದೃಷ್ಟ ಪರೀಕ್ಷೆ ಮಾಡುತ್ತಿದ್ದೆವು. ಒಬ್ಬರೇ ಲಾಟರಿ ಟಿಕೆಟ್‌ ಖರೀದಿ ಮಾಡೋದಕ್ಕಿಂತ ಎಲ್ಲರೂ ಚೂರು ಚೂರು ಹಣ ಹಾಕಿ ಲಾಟರಿ ಟಿಕೆಟ್‌ ಖರೀದಿಸುತ್ತಿದ್ದೆವು. ಅದ್ರಿಂದ ಯಾರಿಗೂ ಹೊರೆಯಾಗುತ್ತಿರಲಿಲ್ಲ. ಲಾಟರಿ ಬಂದರೆ ಎಲ್ಲರಿಗೂ ಅನುಕೂಲವಾಗುತ್ತೆ ಎಂದು ನಂಬಿದ್ದೆವು. ಹೀಗಾಗಿ, ನಾವು 11 ಮಂದಿಯೂ ಸೇರಿ ಆಗಾಗ ಟಿಕೆಟ್‌ ಖರೀದಿ ಮಾಡುತ್ತಿದ್ದೆವು. ಈಗ ಲಾಟರಿ ಬಂದಿರುವ ಟಿಕೆಟ್‌ ಖರೀದಿಗೆ ಹಣವಿರಲಿಲ್ಲ. ಸಾಲ ಮಾಡಿ ಖರೀದಿ ಮಾಡಿದ್ದೆವು. ಅದಕ್ಕೇ ಹತ್ತು ಕೋಟಿ ರೂಪಾಯಿ ಬಂದಿದೆ. ಈ ವಿಚಾರ ತಿಳಿದು ನಮಗೆ ಅತ್ಯಂತ ಖುಷಿಯಾಗಿದೆ ಎಂದು ಪೌರಕಾರ್ಮಿಕ ಮಹಿಳೆಯರು ಹೇಳಿದ್ದಾರೆ.

ನಾವು ಕನಸು ಮನಸಿನಲ್ಲೂ ನಮಗೆ ಇಷ್ಟು ದೊಡ್ಡ ಮೊತ್ತದ ಲಾಟರಿ ಹೊಡೆಯುತ್ತೆ ಎಂದುಕೊಂಡಿರಲಿಲ್ಲ. ಆದ್ರೆ ದೇವರು ನಮಗೆ ವರ ಕೊಟ್ಟಿದ್ದಾರೆ. ನಮ್ಮ ಎಷ್ಟೋ ಕಷ್ಟಗಳು ಇದರಿಂದ ತೀರಲಿವೆ ಎಂದು ಪೌರಕಾರ್ಮಿಕ ಮಹಿಳೆಯರು ಖುಷಿಯಿಂದ ಹೇಳಿದ್ದಾರೆ.

Share Post