CrimeDistricts

ಕಾಡಾನೆಗಳ ಹಿಂಡು ಕಂಡು ದಂಗಾದ ರೈತರು

ಆನೆಕಲ್; ಆನೆಕಲ್‌ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕಾಡಾನೆಗಳ ಉಪಟಳದಿಂದ ಅರಣ್ಯದಂಚಿನ ರೈತರು ಯಾವಾಗಲೂ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಕಳೆದ ರಾತ್ರಿ ಕೂಡಾ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿವೆ. ಮುತ್ಯಾಲಮಡುಗು ಪ್ರದೇಶದಲ್ಲಿ ಆನೆಗಳು‌ ಹಿಂಡು ಕಾಣಿಸಿದ್ದು, ಸ್ಥಳೀಯರ ಭೀತಿಗೆ ಕಾರಣವಾಗಿದೆ.

ಸುಮಾರು 10-15 ಆನೆಗಳ ಹಿಂಡು ಕಳೆದ ಮೂರ್ನಾಲ್ಕು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು ಅರಣ್ಯದಂಚಿನ ರೈತರಲ್ಲಿ ಆತಂಕ ಸೃಷ್ಟಿಸಿದೆ. ರಾತ್ರಿ ವೇಳೆ ಲಗ್ಗೆಯಿಡುವ ಕಾಡಾನೆಗಳ ಹಿಂಡು ರೈತರ ಬೆಳೆಗಳನ್ನ ನಾಶ ಮಾಡುತ್ತಿವೆ. ಗಡಿ ಪ್ರದೇಶವಾದ ವಣಕನಹಳ್ಳಿ, ಸೋಲೂರು, ಚೂಡನಹಳ್ಳಿ, ತೆರೆಗರಹಳ್ಳಿ ಗ್ರಾಮಗಳಲ್ಲಿ ಹೆಚ್ಚಾಗಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿವೆ ಎಂದು ರೈತರು ತಿಳಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ಕಾಡಾನೆಗಳನ್ನ ಅರಣ್ಯಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post