CinemaDistrictsPolitics

Actress ramya; ದರ್ಶನ್‌ ಧ್ರುವನಾರಾಯಣ್‌ ಪರ ನಟಿ ರಮ್ಯಾ ಮತಯಾಚನೆ

ನಂಜನಗೂಡು; ಮೈಸೂರು ಜಿಲ್ಲೆಯ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಸಿನಿಮಾ ನಟ ನಟಿಯರು ಇಂದು ಮೈಸೂರು ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ ಸಿದ್ದರಾಮಯ್ಯ ಪರವಾಗಿ ವರುಣಾದಲ್ಲಿ ರೋಡ್‌ ಶೋ ನಡೆಸಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಇಂದು ನಂಜನಗೂಡು ಕ್ಷೇತ್ರದಲ್ಲಿ ದರ್ಶನ್‌ ಧ್ರುವನಾರಾಯಣ್‌ ಪರವಾಗಿ ಪ್ರಚಾರ ನಡೆಸಿದರು. ರೋಡ್‌ ಶೋ ನಡೆಸಿ ದರ್ಶನ್‌ಗೆ ಮತ ನೀಡುವಂತೆ ಮನವಿ ಮಾಡಿದರು.

ಅಲ್ಲಯ್ಯನಪುರ, ಕಾಟೂರು ಗ್ರಾಮಗಳಲ್ಲಿ ನಟಿ ಹಾಗೂ ಕಾಂಗ್ರೆಸ್‌ ನಾಯಕಿ ರಮ್ಯಾ ಅವರು ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್ ಅವರ ಪರ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು. ರೋಡ್‌ ಶೋ ನಂತರ ಮಾತನಾಡಿದ ನಟಿ ರಮ್ಯಾ, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ದರ್ಶನ್‌ ಧ್ರುವನಾರಾಯಣ್‌ ಅವರಿಗೆ ಮತವನ್ನು ನೀಡುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೇಳೆ ದಿವಂಗತ ಆರ್‌. ಧ್ರುವನಾರಾಯಣ್‌ ಅವರು ನನ್ನ ಗೆಲುವಿಗೆ ನೆರವಾಗಿದ್ದರು. ಹಾಗಾಗಿ ಅವರ ಮಗನಾದ ದರ್ಶನ್‌ ಧ್ರುವನಾರಾಯಣ್‌ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆ. ಕ್ಷೇತ್ರದ ಮತದಾರರನ್ನು ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀಕಂಠನಾಯಕ, ಕುರಟ್ಟಿ ಮಹೇಶ್, ಶಿವಪ್ಪ ದೇವನೂರು, ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

 

Share Post