DistrictsPolitics

ಪಿಎಸ್‌ಐ ಪರಶುರಾಮ್‌ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ

ಕೊಪ್ಪಳ; ಪಿಎಸ್‌ಐ ಪರಶುರಾಮ ಸಾವಿನ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.. ಇಂದು ಮೃತನ ಮನೆಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಈ ಘೋಷಣೆ ಮಾಡಿದ್ದಾರೆ. ಪರಶುರಾಮ್‌ ಅವರ ಪತ್ನಿಗೆ ಇಲಾಖೆಯಲ್ಲಿ ಕೆಲಸ ಕೊಡುತ್ತೇವೆ. ಆದ್ರೆ ರಾಯಚೂರು ವಿವಿ ಅಥವಾ ಜೆಸ್ಕಾಂನಲ್ಲಿ ಕೆಲಸ ಕೊಡುವಂತೆ ಅವರು ಕೇಳಿದ್ದಾರೆ.. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಪರಮೇಶ್ವರ್‌ ಹೇಳಿದ್ದಾರೆ..

ಇದನ್ನೂ ಓದಿ; ಹದಗೆಟ್ಟ ವಿನೇಶ್‌ ಫೋಗಟ್‌ ಆರೋಗ್ಯ!; ಪ್ಯಾರಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ!

ಪರಶುರಾಮ್‌ ಅವರನ್ನು ವರ್ಗಾವಣೆ ಮಾಡಲಾಗಿತ್ತು.. ಇದರಿಂದ ಬೇಜಾರಾಗಿದ್ದ ಪಿಎಸ್‌ಐ ಪರಶುರಾಮ್‌ ಅಂದು ಊಟ ಮಾಡಿ ಮಲಗಿದ್ದರು.. ಆದ್ರೆ ಇದೇ ವೇಳೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.. ಕಾಂಗ್ರೆಸ್‌ ಶಾಸಕರು ಲಂಚ ಕೇಳಿದ್ದರು. ಇದೇ ಕಾರಣಕ್ಕೆ ಪರಶುರಾಮ್‌ ಅವರು ಮನನೊಂದಿದ್ದರು ಎಂದು ಕುಟುಂಬದವರು ಆರೋಪ ಮಾಡಿದ್ದರು.. ಈ ನಡುವೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.. ಇದರ ಜೊತೆಗೆ ಸರ್ಕಾರದ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿನ ಪರಶುರಾಮ್‌ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು..

ಇದನ್ನೂ ಓದಿ; ಫೋಗಟ್ ಚಿನ್ನದ ಕನಸು ಭಗ್ನ; ತೂಕ ಹೆಚ್ಚಿದ್ದಕ್ಕೆ ಅನರ್ಹ

ಶಾಸಕರ ವಿರುದ್ಧ ಆರೋಪ ಕೇಳಿಬಂದ ದಿನವೇ ಸಿಐಡಿ ತನಿಖೆಗೆ ವಹಿಸಲಾಗಿದೆ.. ವರ್ಗಾವಣೆಗೆ ಎರಡು ವರ್ಷ ನಿಗದಿ ಮಾಡಿದ್ದೇವೆ. ಬೇಗ ಯಾಕೆ ವರ್ಗಾವಣೆಯಾಯಿತು..? ಯಾರು ಮಾಡಿದರು..? ಎಂಬುದು ತನಿಖೆಯಿಂದ ಗೊತ್ತಾಗುತ್ತೆ ಎಂದು ಪರಮೇಶ್ವರ್‌ ಹೇಳಿದರು..

ಇದನ್ನೂ ಓದಿ; ಟಿಪ್ಪರ್‌ ಲಾರಿ ಡಿಕ್ಕಿ; ಗರ್ಭಿಣಿ ಹೊಟ್ಟೆಯಿಂದ ಹೊರಬಂದ ಮಗು!

Share Post