CrimeDistricts

ತವರಿಗೆ ಬಂದ ಮಹಿಳೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ!

ಕೋಲಾರ; ವರ್ಷದ ಹಿಂದೆ ಅಷ್ಟೇ ಆಕೆಗೆ ಮದುವೆಯಾಗಿತ್ತು.. ಆದ್ರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ.. ಗಂಡನ ಮನೆಯಿಂದ ತವರು ಮನೆಗೆ ಬಂದ ಮಹಿಳೆ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದಾಳೆ.. ಕೋಲಾರ ನಗರದ ಹೊರವಲಯದಲ್ಲಿರುವ ಸಹಕಾರ ನಗರದಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಹೊಸ ಸಿಎಂ ಹುಡುಕುತ್ತಿದೆಯಾ ಕಾಂಗ್ರೆಸ್‌ ಹೈಕಮಾಂಡ್‌?; ಯಾರಿಗೆ ಅವಕಾಶ ಇದೆ..?

24 ವರ್ಷದ ಮಾಸನ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.. ಈಕೆಯನ್ನು ಕೋಲಾರ ಬಳಿಯ ತೂರಾಂಡಹಳ್ಳಿ ಗ್ರಾಮದ ಉಲ್ಲಾಸ್‌ ಗೌಡ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.. ಮದುವೆಯಾಗಿ ಒಂದು ವರ್ಷವಾಗಿತ್ತು.. ಆದ್ರೆ ಅತ್ತೆ ಮನೆಯವರು ವರದಕ್ಷಿಣೆಗಾಗಿ ಮಾನಸಗೆ ಕಿರುಕುಳ ನೀಡುತ್ತಿದ್ದರಂತೆ.. ಇದರಿಂದ ಬೇಸತ್ತು ತವರು ಮನೆಗೆ ಬಂದಿರುವ ಮಾನಸ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..

ಇದನ್ನೂ ಓದಿ; ಹುಡುಗಿಗಾಗಿ ಬೀದಿ ಕಾಳಗ; ತುಮಕೂರು-ಬೆಂಗಳೂರು ಯುವಕರ ಬಡಿದಾಟ!

ಇದರಿಂದ ಆಕ್ರೋಶಗೊಂಡ ಮಾನಸ ಪೋಷಕರು ಶವವನ್ನು ಉಲ್ಲಾಸ್‌ ಗೌಡ ಮನೆ ಮುಂದಿಟ್ಟು ಪ್ರತಿಭಟನೆ ನಡೆಸಿದರು.. ಆತನ ಮನೆ ಮುಂದೆಯೇ ಶವಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿತ್ತು.. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದಗಳಾಗಿವೆ.. ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

Share Post