ಶೂಟಿಂಗ್ ವೇಳೆ ಖ್ಯಾತ ತಮಿಳು ನಟ ಸೂರ್ಯ ತಲೆಗೆ ಪೆಟ್ಟು!
ಚೆನ್ನೈ; ಸೂರ್ಯ 44 ಚಿತ್ರದ ಶೂಟಿಂಗ್ ವೇಳೆ ತಮಿಳಿನ ಖ್ಯಾತ ನಟ ಸೂರ್ಯ ತಲೆಗೆ ಪೆಟ್ಟಾಗಿದ್ದು, ಇದರಿಂದಾಗಿ ಚಿತ್ರೀಕರಣ ನಿಲ್ಲಿಸಲಾಗಿದೆ.. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.. ಊಟಿಯಲ್ಲಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ತೊಂದರೆ ಇಲ್ಲ ಎಂದು ತಿಳಿದುಬಂದಿದೆ..
ಇದನ್ನೂ ಓದಿ;ವರಲಕ್ಷ್ಮೀ ವ್ರತದ ಪೂಜಾ ಸಮಯ ಏನು..?; ವ್ರತದ ವಿಧಾನ ಹೇಗೆ..?
ಊಟಿಯಲ್ಲಿ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಲೆಗೆ ಸಣ್ಣ ಪೆಟ್ಟಾಗಿ ರಕ್ತಸ್ರಾವವಾಗಿದೆ.. ವೈದ್ಯರು ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದಾರೆ.. ಈ ಹಿನ್ನೆಲೆಯಲ್ಲಿ ಊಟಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.. ಈ ಸಿನಿಮಾವನ್ನು ಕಾರ್ತೀಕ್ ಸುಬ್ಬರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ.. ರಾಜಶೇಖರ್ ಪಾಂಡಿಯನ್ ಅವರು ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ..
ಇದನ್ನೂ ಓದಿ; ಮದುವೆಯಾಗ್ತೀನೆಂದು ಕ್ಯಾಬ್ ಡ್ರೈವರ್ ಮೋಸ; ಮಹಿಳೆಯಿಂದ ದೂರು!
ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಸಾಮಾಜಿಕ ಜಾಲತಾಣದಲ್ಲಿ ಸೂರ್ಯದ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.. ಸೂರ್ಯ ಅಣ್ಣ ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆಯಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.. ಆರೋಗ್ಯವಾಗಿದ್ದಾರೆ. ಯಾರೂ ಚಿಂತಿಸುವುದು ಬೇಡ ಎಂದು ಹೇಳಿದ್ದಾರೆ..
ಇದನ್ನೂ ಓದಿ; ಹೆಚ್ಚು ಪ್ಯಾರಾಸಿಟಮಾಲ್ ಸೇವಿಸಿದರೆ ಲಿವರ್ ಡ್ಯಾಮೇಜ್!