Districts

ನೀರಿನ ವಿಚಾರಕ್ಕಾಗಿ ಮನೆಗೆ ನುಗ್ಗಿ ರೌಡಿಗಳು ದಾಂಧಲೆ

ಆನೇಕಲ್: ಕುಡಿಯವ ನೀರು ಹಿಡಿಯುವ ವಿಚಾರಕ್ಕಾಗಿ ರೌಡಿಗಳು ಮನೆಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ತಾಲೂಕಿನ ಕಾಳನಾಯಕನಹಳ್ಳಿಯಲ್ಲಿನಡೆದಿದೆ.ನೀರು ಹಿಡಿಯುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರೌಡಿಗಳು ಪೇಪರ್ ಏಜೆಂಟ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮೇರಿ ಹಾಗೂ ಅರುಣ್, ಬೇಬಿ ಎಂಬುವವರು ಗಲಾಟೆ ನಡೆಸಿದ್ದಾರೆ. ಮನೆಯ ವಸ್ತುಗಳನ್ನು ಬಿಸಾಡಿ, ಮಹಿಳೆಯರ ಮೇಲೂ ದರ್ಪ ತೋರಿದ್ದಾರೆ. ಗಲಾಟೆ ಬಳಿಕ ಬೇಬಿ, ಯುವಕರನ್ನು ಕರೆಸಿಕೊಂಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಮನೆ ಧ್ವಂಸ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ರೌಡಿಗಳು ದಾಂಧಲೆ ನಡೆಸಿದ್ದರು. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share Post