ಮೈಸೂರಿನಲ್ಲಿ ಮುಂಜಾನೆಯಿಂದ ಭರ್ಜರಿ ಮಳೆ; ತಗ್ಗುಪ್ರದೇಶಗಳು ಜಲಾವೃತ
ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇಂದು ಬೆಳಗಿನಜಾವದಿಂದಲೇ ಜೋರು ಮಳೆಯಾಗುತ್ತಿದ್ದು, ಇದ್ರಿಂದಾಗಿ ತಗ್ಗುಪ್ರದೇಶಗಳಲ್ಲಿ ವಾಸಿಸುತ್ತಿರುವ ಜನ್ರು ಪರದಾಡುವಂತಾಗಿದೆ. ಹಲವು ಕಡೆಗಳಲ್ಲಿ ಮರಗಳು ಕೂಡಾ ಧರೆಗಿಳಿದಿವೆ.
ಸಿದ್ದಾರ್ಥನಗರದ ಸನ್ಮಾರ್ಗ, ಗಾಯತ್ರಿಪುರಂನ ಪೆಟ್ರೋಲ್ ಬಂಕ್ ಹಾಗೂ ಜಯನಗರದ ಬೇಡರ ಕಣ್ಣಪ್ಪ ದೇಗುಲದ ಸಮೀಪ ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ಪಡುವಾರಹಳ್ಳಿ, ವಿಜಯಶ್ರೀಪುರ, ಆಲನಹಳ್ಳಿ ಹಾಗೂ ಜಲಪುರಿಗಳ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮುಂಜಾನೆಯೇ ಮಳೆ ಬರುತ್ತಿರುವುದರಿಂದ ಕೆಲಸಕ್ಕೆ ಹೋಗುವವರು ಪರದಾಡಿದರು.