DistrictsHealth

ಬಿರಿಯಾನಿ ತಿಂದ 25 ಕೂಲಿ ಕಾರ್ಮಿಕರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಚಾಮರಾಜನಗರ; ಹಿಂದಿನ ದಿನ ಮಾಡಿದ್ದ ಚಿಕನ್‌ ಬಿರಿಯಾಗಿ ತಿಂದು 25 ಮಂದಿ ಕೂಲಿ ಕಾರ್ಮಿಕರು ಅಸ್ವಸ್ಥಗೊಂಡಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯ ಗ್ರಾಮದಲ್ಲಿ ನಡೆದಿದೆ. ಎಲ್ಲರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 

ಅರೇಪಾಳ್ಯದ ಸಂತೋಷ್‌ ಎಂಬುವವರು ಜುಲೈ 18ರಂದು ರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಸ್ನೇಹಿತರಿಗೆಂದು ಚಿಕನ್‌ ಬಿರಿಯಾನಿ ಮಾಡಿಸಿದ್ದರು. ಅದು ಜಾಸ್ತಿ ಉಳಿದಿದ್ದರಿಂದ ಮಾರನೆಯ ದಿನ ಕಬ್ಬು ಕಟಾವಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೆ ನೀಡಿದ್ದರು. ಕಾರ್ಮಿಕರು ಬಿರಿಯಾನಿಯನ್ನು ಅಲ್ಲೇ ತಿಂದಿದ್ದಲ್ಲದೇ ಸಂಜೆ ಮನೆಗಳಿಗೂ ತೆಗೆದುಕೊಂಡು ಹೋಗಿದ್ದರು.

ಆದ್ರೆ ಬಿರಿಯಾನಿ ತಿಂದ ಎಲ್ಲರಿಗೂ ಈಗ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕೆಲವರು ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಅವರನ್ನು ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಶಾಸಕ ಎನ್‌.ಮಹೇಶ್‌ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ.

Share Post