Cinema

ಸಲ್ಲು ಶರ್ಟ್​ ಬಟನ್​ ಹಾಕಿದ ಆಲಿಯಾ ಭಟ್‌

ಬಾಲಿವುಡ್‌ : ನಟಿ ಆಲಿಯಾ ಭಟ್​ ಬಾಲಿವುಡ್ ನಲ್ಲಿ ಸಾಕಷ್ಟು ಮಿಂಚಿದ್ದಾರೆ. ಈಗ ಆರ್‌ ಆರ್‌ ಆರ್‌ ಸಿನಿಮಾದ ಮೂಲಕ ಅವರು ದಕ್ಷಿಣ ಭಾರತಕ್ಕೂ ಕಾಲಿಡುತ್ತಿದ್ದಾರೆ. ಜ.7ರಂದು ವಿಶ್ವಾದ್ಯಂತ ಈ ಚಿತ್ರ ರಿಲೀಸ್​ ಆಗಲಿದೆ. ರಾಜಮೌಳಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಇಡೀ ತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.. ಸಿನಿಮಾದ ಹೀರೋಗಳಾದ ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಜೊತೆ ಆಲಿಯಾ ಭಟ್​ ಹಲವು ವೇದಿಕೆಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರತಂಡ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ ಬಾಸ್​ ಶೋಗೆ ಭೇಟಿ ನೀಡಿತ್ತು. ಈ ವೇಳೆ ಕೆಲವು ಫನ್ನಿ ಘಟನೆಗಳು ನಡೆದವು. ತಮ್ಮ ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಆಲಿಯಾ ಭಟ್​ ಸಹಾಯ ಮಾಡಬೇಕಾಯಿತು. ಆ ವಿಡಿಯೋ ಈಗ ಸಖತ್‌ ವೈರಲ್​ ಆಗಿದೆ.
ರಾಜಮೌಳಿ, ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್​ ಅವರನ್ನು ಸಲ್ಮಾನ್​ ಖಾನ್​ ಅವರು ವೇದಿಕೆಗೆ ಸ್ವಾಗತಿಸಿದರು. ಅನೇಕ ವಿಚಾರಗಳ ಬಗ್ಗೆ ಈ ಸೆಲೆಬ್ರಿಟಿಗಳು ಮಾತನಾಡಿದರು. ‘ಆರ್​ಆರ್​ಆರ್​’ ಚಿತ್ರದ ವಿಶೇಷತೆಗಳ ಬಗ್ಗೆ ವಿಷಯ ವಿನಿಮಯ ಮಾಡಿಕೊಂಡರು. ಈ ವೇಳೆ ಸಲ್ಮಾನ್​ ಖಾನ್​ ಧರಿಸಿದ್ದ ಶರ್ಟ್​ ಬಟನ್​ ಓಪನ್​ ಆಗಿತ್ತು. ‘ನನ್ನ ಎದೆ ಭಾಗ ಕಾಣುತ್ತಿದೆ’ ಎಂದು ಅವರು ಹೇಳುತ್ತಿದ್ದಂತೆಯೇ ಆಲಿಯಾ ಭಟ್​ ಅವರು ಬಟನ್​ ಹಾಕಲು ಸಹಾಯ ಮಾಡಿದರು.

Share Post