ನಿಮಗೆ ಕೆಲಸ ಆಗ್ಬೇಕೆ? ನನಗೆ ಪೇ ಮಾಡಿ; ತುಮಕೂರಿನಲ್ಲಿ ಪೇ ಎಂಎಲ್ ಎ ಪೋಸ್ಟರ್
ತುಮಕೂರು; ಕೆಲ ತಿಂಗಳ ಹಿಂದೆ ಪೇಸಿಎಂ ಪೋಸ್ಟರ್‌ಗಳು ರಾಜ್ಯ ರಾಜಕೀಯದಲ್ಲಿ ದೊಡ್ಡ ಸದ್ದು ಮಾಡಿದ್ದವು. ಈ ಬಗ್ಗೆ ಅಲ್ಲಲ್ಲಿ ದೂರುಗಳು ಕೂಡಾ ದಾಖಲಾಗಿದ್ದವು. ಇದೀಗ ಪೇ ಎಂಎಲ್‌ಎ ಪೋಸ್ಟರ್‌ಗಳು ಸದ್ದು ಮಾಡುತ್ತಿವೆ. ತುಮಕೂರಿನಲ್ಲಿ ಬಿಜೆಪಿ ಶಾಸಕರ ವಿರುದ್ಧ ಪೇ ಎಂಎಲ್‌ಎ ಪೋಸ್ಟರ್ ಅಭಿಯಾನ ನಡೆಸಲಾಗಿದೆ.
ತುಮಕೂರಿನಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್ ವಿರುದ್ದ ಪೇ ಎಂಎಲ್ ಎ ಪೋಸ್ಟರ್ ಅಭಿಯಾನ ಶುರುವಾಗಿದೆ. ನಿಮಗೆ ಕೆಲಸ ಆಗಬೇಕೆ ನನಗೆ ಪೇ ಮಾಡಿ ಎಂಬ ಬರಹಗಳ ಮೂಲಕ ಶಾಸಕ ಜ್ಯೋತಿ ಗಣೇಶ್ ಪೋಟೊ ಹಾಕಿರುವ ಪೇ ಎಂಎಲ್ ಎ ಪೋಸ್ಟರ್ ಗಳನ್ನ ನಗರದ ಪ್ರಮುಖ ಬೀದಿ ಬದಿಗಳ ಗೋಡೆಗಳಲ್ಲಿ ಅಂಟಿಸಲಾಗಿದೆ.
ಮದ್ಯ ರಾತ್ರಿಯಲ್ಲಿ ನಾಲ್ವರು ಅಪರಿಚಿತರು ಪೋಸ್ಟರ್ ಗಳನ್ನ ಅಂಟಿಸುತ್ತಿರುವ ಪೋಟೊಗಳು ವೈರಲ್ ಆಗಿದೆ. ಬಿಜೆಪಿ ಸಾಧನೆಗಳ ಜಾಹಿರಾತುಗಳ ಪಕ್ಕದಲ್ಲೆ ಈ ಪೋಸ್ಟರ್ ಗಳನ್ನ ಅಂಟಿಸಿದ್ದಾರೆ.ಮೇ 05 ರಂದು ಸಿ ಎಂ ಬಸವರಾಜ ಬೊಮ್ಮಾಯಿ ತುಮಕೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಶಾಸಕ ಜ್ಯೋತಿಗಣೇಶ್ ಅವರ ವಿರುದ್ದ ಈ ಷಡ್ಯಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಪೇ ಸಿ ಎಂ ಪೋಸ್ಟರ್ ಗಳು ರಾಜ್ಯಾಧ್ಯಂತ ಭಾರಿ ಸದ್ದು ಮಾಡಿತ್ತು, ಅಪರಿಚಿತರು ಸಿ ಎಂ ಭಾವಚಿತ್ರವಿರುವ ಪೋಸ್ಟ್ ಗಳನ್ನ ಬೆಂಗಳೂರಿನ ಬೀದಿ ಬದಿ ಗೋಡೆಗಳಲ್ಲಿ ಅಂಟಿಸಿದ್ದರು. ಬಳಿಕ ಇದನ್ನ ಕಾಂಗ್ರೇಸ್ ಬಹಿರಂಗವಾಗಿಯೇ ಪೇ ಸಿ ಎಂ ಪೋಸ್ಟರ್ ಗಳನ್ನ ಅಂಟಿಸುವ ಪ್ರಯತ್ನಕ್ಕೆ ಮುಂದಾಗಿತ್ತು.