BengaluruCrimePolitics

ಶಾಸಕರ ಪುತ್ರನ ಲಂಚ ಪ್ರಕರಣ; ನಲವತ್ತು ನಲವತ್ತು ತೋಳ ಹಳ್ಳಕ್ಕೆ ಬಿತ್ತು – ಕಾಂಗ್ರೆಸ್‌ ಲೇವಡಿ

ಬೆಂಗಳೂರು; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರ ನವಲತ್ತು ಪರ್ಸೆಂಟ್‌ ಕಮೀಷನ್‌ ಪಡೆಯುತ್ತಿದೆ ಅನ್ನೋದು ಸಾಬೀತಾಗಿದೆ ಎಂದು ಹೇಳಿದೆ. ರಾಜ್ಯ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್‌ ಮಾಡಲಾಗಿದ್ದು, ನಲವತ್ತು, ನಲವತ್ತು ತೋಳ ಹಳ್ಳಕ್ಕೆ ಬಿತ್ತು ಎಂದು ಲೇವಡಿ ಮಾಡಲಾಗಿದೆ.

ಟ್ವೀಟ್‌-೧:

ಕಮಿಷನ್ನಿನ ಪರ್ಸೆಂಟೂ ನಲವತ್ತು, ಪಡೆಯುತ್ತಿದ್ದ ಲಂಚವೂ ನಲವತ್ತು, ನಲವತ್ತು ನಲವತ್ತು, ತೋಳ ಹಳ್ಳಕ್ಕೆ ಬಿತ್ತು!! ಶಾಸಕರ ಪರವಾಗಿ ಶಾಸಕರ ಪುತ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬೀಳುವ ಮೂಲಕ @BJP4Karnataka ಯ ಕಮಿಷನ್ ದಂಧೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಂತಾಗಿದೆ. ಈಗ @BSBommai  ಅವರು ರಾಜೀನಾಮೆ ಕೊಡ್ತಾರಾ? #ElectionCollection

ಟ್ವೀಟ್‌-೨; 

ಕಮಿಷನ್ ಲೂಟಿಗೆ ದಾಖಲೆ ಕೇಳುವ @BSBommai  ಅವರೇ, ದಾಖಲೆಗಳು ಕಂತೆ ಕಂತೆಯಾಗಿ ಸಿಕ್ಕಿವೆ ನೋಡಿ. ಈಗ ಕಮಿಷನ್ ಆರೋಪ ಒಪ್ಪುವಿರಾ? ಚುನಾವಣೆ ಖರ್ಚಿಗಾಗಿ ಬಿಜೆಪಿಯ #ElectionCollection ಬಿರುಸಿನಿಂದ ಸಾಗಿದೆ, ಅಧಿಕಾರಾವಧಿ ಮುಗಿಯುತ್ತಿದೆ, ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು @BJP4Karnataka  ಬಕಾಸುರನಂತೆ ದೋಚಿ ಬಾಚುತ್ತಿದೆ.

ಟ್ವೀಟ್‌-೩;

ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ! ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು? ಇಂದು ಅಮಿತ್ ಶಾ ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ? ಅಮಿತ್ ಶಾ ಬರುತ್ತಿರುವುದೇ ಇಲ್ಲಿನ ‘ಸಂಪತ್ತು’ ಕೊಂಡೊಯ್ಯುವುದಕ್ಕಾ @BJP4Karnataka  ? #ElectionCollection

 

ಟ್ವೀಟ್‌-೪; 

ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು @BJP4Karnataka ? ◆ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayPM ಗೆ ತಲುಪಿಸುವುದಕ್ಕಾ? ◆ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ? ◆ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?

 

ಟ್ವೀಟ್‌-೫; 

“ನಾ ಖಾವುಂಗಾ, ನಾ ಖಾನೆದುಂಗಾ” ಎನ್ನುವ @narendramodi  ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? “ಶಬಾಷ್” ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ?

Share Post