BengaluruCrime

ಕದ್ದ ಕಾರಿಗೆ ಎಂಎಲ್‌ಸಿ ಕಾರ್‌ ನಂಬರ್‌ ಬಳಕೆ; ಮಾರಾಟಕ್ಕೆ ಯತ್ನಿಸುತ್ತಿದ್ದವರ ಅರೆಸ್ಟ್‌

ಬೆಂಗಳೂರು; ಕದ್ದ ಕಾರ್‌ಗಳಿಗೆ ನಂಬರ್‌ ಬದಲಾಯಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಲಾಗಿದೆ. ಜೆಡಿಎಸ್‌ನ ಎಂಎಲ್‌ಸಿ ಭೊಜೇಗೌಡರ ಕಾರಿನ ನಂಬರ್‌ ಬಳಸಿ ಇನ್ನೋವಾ ಕಾರೊಂದನ್ನು ಮಾರಾಟಕ್ಕೆ ಯತ್ನಿಸಿದ್ದು, ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಸೆಕೆಂಡ್‌ ಹ್ಯಾಂಡ್‌ ಕಾರ್‌ ಶೋ ರೂಂನಲ್ಲಿ ಇನ್ನೋವಾ ಕಾರೊಂದನ್ನು ಮಾರಾಟಕ್ಕೆ ಇಡಲಾಗಿತ್ತು. ಅದರ ನಂಬರ್‌ ಎಂಎಲ್‌ಸಿ ಭೋಜೇಗೌಡರ ಕಾರಿನ ನಂಬರ್‌ ಆಗಿತ್ತು. ಇದನ್ನು ಭೋಜೇಗೌಡರ ಪಿಎ ಮಾದೇಶ್‌ ನೋಡಿದ್ದು, ಶೋರೂಂ ನಲ್ಲಿ ವಿಚಾರಿಸಿದ್ದಾರೆ. ಕಾರನ್ನು ಮಾರಾಟಕ್ಕೆ ಇಟ್ಟಿರೋದಾಗಿ ಶೋರೂಂ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ಭೋಜೇಗೌಡರಿಗೆ ಕರೆ ಮಾಡಿ ಕೇಳಿದಾಗ ಅವರ ಕಾರು ಮನೆ ಮುಂದೆಯೇ ಇರುವುದು ಖಾತ್ರಿಯಾಗಿದೆ. ಕೂಡಲೇ ಭೋಜೇಗೌಡರ ಪಿಎ ಮಾದೇಶ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share Post