Districts

ಕೊರೋನಾ ಹೆಚ್ಚಳ: ಮಂಡ್ಯ ಡಿಸಿ ತುರ್ತು ಸಭೆ

ಮಂಡ್ಯ: ಓಂ ಶಕ್ತಿ ದೇವಾಲಯಲಕ್ಕೆ ತೆರಳಿದ್ದ ಭಕ್ತರಿಗೆ ಕೊರೋನಾ ಹೆಚ್ಚಾದ ಹಿನ್ನೆಲೆಯಲ್ಲಿ ಮಂಡ್ಯದ ಜಿಲ್ಲಾಧಿಕಾರಿ ಅಶ್ವತಿ ತುರ್ತು ಸಭೆ ಕರೆದಿದ್ದಾರೆ. ಡಿಸಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಲಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾಧಿಕಾರಿ ಸಭೆ ಕರೆದಿದ್ದಾರೆ.
ಡಿಸೆಂಬರ್‌ ೩೧ ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗ್ರಾಮಸ್ಥರು ತಮಿಳುನಾಡಿನ ಸುಪ್ರಸಿದ್ದ ಶ್ರೀ ಕ್ಷೇತ್ರ ಓಂಶಕ್ತಿ ದೇವಾಲಯಕ್ಕೆ ತೆಗಳಿದ್ದರು. ಅಲ್ಲದೇ ಈ ದೇವಾಲಯಕ್ಕೆ ನಾನಾ ಕಡೆಯಿಂದ ಸಾವಿರಾರೂ ಭಕ್ತರು ಬಂದಿದ್ದರು. ಅಲ್ಲಿ ದೇವರ ದರ್ಶನ ಮುಗಿಸಿಕೊಂಡು ಗ್ರಾಮಸ್ಥರು ಮಂಗಳವಾರ ವಾಪಾಸ್‌ ಪಟ್ಟಣಕ್ಕೆ ಬಂದಿದ್ದಾರೆ. ಈ ವೇಳೆ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು, ಅವರಲ್ಲಿ ೫೦ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸದ್ಯ ಸೋಂಕಿತರನ್ನು ಮಳವಳ್ಳಿ ಪಟ್ಟಣದ ಕೋವಿಡ್‌ ಕೇರೆ ಸೆಂಟರ್‌ ನಲ್ಲಿ ಇರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಕೂಡ ಕೆಲ ನಿರ್ಬಂಧ ಹೇರಿದ್ದು, ೨ ವಾರಗಳ ಕಾಲ ವೀಕೆಂಡ್‌ ಕರ್ಫ್ಯೂ ವಿಧಿಸಿದೆ. ಈ ವೇಳೆ ತುರ್ತು ಸೇವೆ ಬಿಟ್ಟು ಅನಗತ್ಯ ವಾಹನ ಸಂಚಾರಕ್ಕೆ ಬ್ರೇಕ್‌ ಹಾಕಿದೆ. ಜಿಲ್ಲೆಯಲ್ಲಿ ಕೊರೋನಾ ತಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Share Post