Health

24ಗಂಟೆಯಲ್ಲಿ 90ಸಾವಿರಕ್ಕೂ ಹೆಚ್ಚು ಕೋವಿಡ್‌ ಕೇಸ್‌ ದಾಖಲು

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೋವಿಡ್‌ ಪ್ರಕರಣಗಳು ಡಬಲ್‌ ಆಗಿದೆ. ನಿನ್ನೆ ಕೇಂದ್ರ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ಒಂದೇ ದಿನಕ್ಕೆ 90 ಸಾವಿರಕ್ಕೂ ಹೆಚ್ಚು ಕೋವಿಡ್‌ ಕೇಸ್‌ಗಳು ದಾಖಲಾಗಿವೆ.  ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದೆ. 325 ಮಂದಿ ಕೋವಿಡ್‌ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಈವರೆಗೆ ಒಟ್ಟಾರೆ 4,82,876 ಮಂದಿ ಕೊರೊನಾದಿಂದ ಮರಣ ಹೊಂದಿದ್ದಾರೆ.

ಇನ್ನು ರೂಪಾಂತರಿ ತಳಿ ಓಮಿಕ್ರಾನ್‌ ಕೂಡ ನಿಧಾನವಾಗಿ ಏರುತ್ತಿದೆ. ದೇಶದಲ್ಲಿ ಒಟ್ಟು 2630 ಓಮಿಕ್ರಾನ್‌ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೇಸ್‌ ದಾಖಲಾಗಿದೆ, ದೆಹಲಿ ಎರಡನೇ ಸ್ಥಾನದಲ್ಲಿದೆ.

 

ಕೋವಿಡ್‌ ನಿಯಂತ್ರಿಸುವ ನಿಟ್ಟಿನಿಂದ ರಾಜ್ಯಗಳು, ನೈಟ್‌ ಕರ್ಫ್ಯೂ , ಸೆಮಿ ಲಾಕ್‌ ಡೌನ್‌ , ವೀಕೆಂಡ್‌ ಲಾಕ್‌ ಡೌನ್‌ ಅಸ್ತ್ರ ಪ್ರಯೋಗಿಸುತ್ತಿವೆ. ಫೆಬ್ರುವರಿ ಮಧ್ಯವಾರಗಳಲ್ಲಿ, ದಿನ ಒಂದಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಕೇಸಸ್‌ ಬರಬಹುದೆಂದು ಅಂದಾಜಿಸಲಾಗಿದೆ.

Share Post