CrimeDistricts

ಕಿಮ್ಸ್‌ ಆಸ್ಪತ್ರೆ ಕ್ವಾಟರ್ಸ್‌ನಲ್ಲಿ ನಾಲ್ಕು ಮನೆಗಳ ಕಳವು

ಹುಬ್ಬಳ್ಳಿ; ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಕ್ವಾಟರ್ಸ್‌ನಲ್ಲಿ ನಾಲ್ಕು ಮನೆಗಳಲ್ಲಿ ಕಳವು ಮಾಡಲಾಗಿದೆ. ಕಿಮ್ಸ್‌ ಆಸ್ಪತ್ರೆ ಆವರಣದಲ್ಲೇ ಕ್ವಾಟರ್ಸ್‌ ಇದ್ದು, ಇಲ್ಲಿನ ಬ್ಲಾಕ್‌ ನಂಬರ್‌ 2ರ ಒಂದು ಮನೆ ಹಾಗೂ ಬ್ಲಾಕ್‌ ನಂಬರ್‌ ಆರರಲ್ಲಿ ಮೂರು ಮನೆಗಳಿಗೆ ಕಳ್ಳರು ಕನ್ನ ಹಾಕಿ, ಹಣ, ನಗದು ದೋಚಿಸಿದ್ದಾರೆ.

ಈ ಹಿಂದೆ ಕೂಡಾ ಇಲ್ಲಿ ಕಳ್ಳತನ ನಡೆದಿತ್ತು. ಕಳೆದ ರಾತ್ರಿ ಕೂಡಾ ಕಳ್ಳರು ಕೈಚಳಕ ತೋರಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳರ ಚಲವಲನ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share Post