ಕಾಳಿ ನದಿಯಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಗಳು
ಕಾರವಾರ; ಕಾಳಿ ನದಿಯಲ್ಲಿ ಈಜಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮೊಸಳೆಗಳೆರಡು ಎಳೆದೊಯ್ದಿವೆ. ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ದುರ್ಘಟನೆ ನಡೆದಿದೆ.
ಗುಜರಾತ್ ಮೂಲದ ಪೀತಾಂಬರ್ ದಾಸ್ ಎಂಬುವವರು ದಾಂಡೇಲಿಯಲ್ಲಿ ವಾಸವಿದ್ದರು. ಎಂದಿನಂತೆ ಅವರು ಇಂದು ಬೆಳಗ್ಗೆ ಕಾಳಿ ನದಿಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಎರಡು ಮೊಸಳೆಗಳು ಪೀತಅಂಬರ್ ದಾಸ್ ಮೇಲೆ ದಾಳಿ ಮಾಡಿ ಎಳೆದೊಯ್ದಿವೆ.
ಮೊಸಳೆಗಳು ಪೀತಾಂಬರ್ ಅವರನ್ನು ಮೊಸಳೆಗಳನ್ನು ಎಳೆದೊಯ್ದಿರುವುದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಷ್ಟೊತ್ತಿಗಾಗಲೇ ಮೊಸಳೆಗಳು ಆ ವ್ಯಕ್ತಿಯನ್ನು ತಿಂದು ಮುಗಿಸಿವೆ. ಪೊಲೀಸರು ಮೃತನ ಅವಶೇಷಗಳು ಸಿಗಬಹುದಾ ಎಂದು ಹುಡುಕಾಟ ನಡೆಸಿದ್ದಾರೆ.