ವೃದ್ಧೆಯನ್ನೂ ಬಿಡದ ಕಾಮುಕ!; ಚಿಂತಾಮಣಿ ಆಸ್ಪತ್ರೆಯಲ್ಲಿ ಪೈಶಾಚಿಕ ಕೃತ್ಯ!
ಚಿಕ್ಕಬಳ್ಳಾಪುರ; ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಪೈಶಾಚಿಕಿ ಕೃತ್ಯ ಇನ್ನೂ ಹಸಿಯಾಗಿರುವಾಗಲೇ ಇಂತಹ ಕೃತ್ಯಗಳು ದೇಶಾದ್ಯಂತ ಮುಂದುವರೆದಿವೆ.. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಮುಕನೊಬ್ಬ ವೃದ್ಧೆಯನ್ನು ಕೂಡಾ ಬಿಟ್ಟಿಲ್ಲ.. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಲಾಗಿದೆ.. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ಈ ಕೃತ್ಯ ಎಸಗಲಾಗಿದೆ..
ಇದನ್ನೂ ಓದಿ; ಸ್ಕ್ರೂ ಡ್ರೈವರ್‌ನಿಂದ ಪತ್ನಿಯನ್ನು ಚುಚ್ಚಿ ಚುಚ್ಚಿ ಕೊಂದ ಪಾಪಿ!
ಆರೋಪಿ ಇರ್ಫಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.. ಈಗ ಚಿಂತಾಮಣಿ ನಗರದ ಹೈದರ್ ಅಲಿ ನಗರದ ನಿವಾಸಿ ಎಂದು ತಿಳಿದುಬಂದಿದೆ.. ಚಿಕಿತ್ಸೆಗೆಂದು ಬಂದಿದ್ದ ವೃದ್ಧೆ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್‌ನಲ್ಲಿ ಮಲಗಿದ್ದಳು.. ಈ ವೇಳೆ ಇರ್ಫಾನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ..
ಸರ್ಕಾರಿ ಆಸ್ಪತ್ರೆಯ ವೈದ್ಯರೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.. ಸ್ಥಳಕ್ಕೆ ಡಿವೈಎಸ್‌ಪಿ ಮುರುಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..