ಖಾಸಗಿ ಹೋಟೆಲ್ನಲ್ಲಿ ಗಲಾಟೆ; ಮುತಪ್ಪ ರೈ ಪುತ್ರನ ವಿರುದ್ಧ ಕೇಸ್
ಬೆಂಗಳೂರು; ರಿಚ್ಮಂಡ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ನಡೆದ ಗಲಾಟೆ ಸಂಬಂಧ ಪೊಲೀಸರು ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದ ಆದೇಶದ ಮೇರೆಗೆ ಈ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.
ರಿಚ್ಮಂಡ್ ರಸ್ತೆಯ ಕೇಝ್ ಹೋಟೆಲ್ನಲ್ಲಿ ಗಲಾಟೆ ನಡೆದಿತ್ತು. ಈ ವೇಳೆ ಶ್ರೀನಿವಾಸ ನಾಯ್ಡು ಎಂಬುವವರ ಮೇಲೆ ರಿಕ್ಕಿ ರೈ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅನಂತರವೂ ರಿಕ್ಕಿ ರೈ ಅವರು ತಮ್ಮ ವಕೀಲ ನಾರಾಯಣ ಸ್ವಾಮಿಯವರು ಕೂಡಾ ಶ್ರೀನಿವಾಸ ನಾಯ್ಡುಗೆ ಬೆದರಿಕೆ ಹಾಕಿದ್ದರಂತೆ. ಪೊಲೀಸರಿಗೆ ದೂರು ಕೊಟ್ರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡಾ ಹಾಕಿದ್ದರಂತೆ.
ಈ ಹಿನ್ನೆಲೆಯಲ್ಲಿ ಶ್ರೀನಿವಾಸ ನಾಯ್ಡು ಅವರು ಪೊಲೀಸರಿಗೆ ದೂರು ದಾಖಲಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಕೋರ್ಟ್ ಪೊಲೀಸರಿಗೆ ದೂರ ದಾಖಲಿಸಲು ಸೂಚನೆ ಕೊಟ್ಟಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.