Districts

ವಿರಾಜಪೇಟೆ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು; 80 ಕುಟುಂಬ ಸ್ಥಳಾಂತರ

ಕೊಡಗು; ವಿರಾಜಪೇಟೆಯಲ್ಲಿರುವ ಅಯ್ಯಪ್ಪ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಭಾರಿ ಮಳೆಯ ಕಾರಣಕ್ಕೆ ಈ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವ ಭೀತಿ ಎದುರಾಗಿದೆ. ಈ ಬೆಟ್ಟದಲ್ಲಿ ಸುಮಾರು ಎಂಬತ್ತು ಕುಟುಂಬಗಳು ವಾಸ ಮಾಡುತ್ತಿವೆ.. ಅಲ್ಲಿ ವಾಸಿಸುತ್ತಿದ್ದ ಎಲ್ಲಾ 221 ಮಂದಿಯನ್ನೂ ಸ್ಥಳಾಂತರ ಮಾಡಲಾಗಿದೆ.

 ಅಯ್ಯಪ್ಪ ಬೆಟ್ಟ ಹಾಗೂ ಮಲೆತಿರಿಕೆ ಬೆಟ್ಟದಲ್ಲಿ ವಾಸ ಮಾಡುತ್ತಿದ್ದ 80 ಕುಟುಂಬದ 221 ಜನರನ್ನು ವಿರಾಜಪೇಟೆಯ ಸಂತ ಅನ್ನಮ್ಮ‌ ಶಾಲೆಯಲ್ಲಿ ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಿ ಸ್ಥಳಾಂತರಿಸಲಾಗಿದೆ. ಬೆಟ್ಟ ಕುಸಿತವಾದರೆ ಬೆಟ್ಟದ‌ ಮಣ್ಣು ಕೆಳಗೆ ಇರುವ ಮನೆಗಳ‌ ಮೇಲೆ ಬೀಳುವ ಆತಂಕ ಜನರನ್ನು ಕಾಡುತ್ತಿದೆ.

Share Post