CrimeNational

ಪಾಕ್‌ ಪತ್ರಕರ್ತನ ಜೊತೆ ಅನ್ಸಾರಿ ನಂಟು; ಫೋಟೋ ರಿಲೀಸ್‌ ಮಾಡಿದ ಬಿಜೆಪಿ

ನವದೆಹಲಿ; ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಪಾಕಿಸ್ತಾನದ ಪತ್ರಕರ್ತನ ನಂಟಿದೆ ಎಂಬುದಕ್ಕೆ ಬಿಜೆಪಿ ಸಾಕ್ಷಿ ಬಿಡುಗಡೆ ಮಾಡಿದೆ. ಪಾಕಿಸ್ತಾನಿ ಪತ್ರಕರ್ತನ ಜೊತೆ ಅನ್ಸಾರಿ ವೇದಿಕೆ ಹಂಚಿಕೊಂಡಿದ್ದ ಫೋಟೋವನ್ನು ಬಿಜೆಪಿ ನಾಯಕರು ರಿಲೀಸ್‌ ಮಾಡಿದ್ದಾರೆ. ಪಾಕಿಸ್ತಾನದ ಐಎಸ್ಐ ಪರ ಗೂಢಚಾರಿಕೆ ನಡೆಸಿರುವ ಅಲ್ಲಿನ ಪತ್ರಕರ್ತರನ್ನು ಭಾರತಕ್ಕೆ ಕರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ, ಇದೀಗ ಆ ಬಗ್ಗೆ ಫೋಟೊ ಬಿಡುಗಡೆ ಮಾಡಿದೆ.

ಭಯೋತ್ಪಾದನೆ ವಿಷಯವಾಗಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಮಾವೇಶದ ಚಿತ್ರದಲ್ಲಿ ಹಮೀದ್ ಅನ್ಸಾರಿ ಅವರು ಮಧ್ಯದಲ್ಲಿ ಕುಳಿತಿದ್ದು, ಅದೇ ವೇದಿಕೆಯಲ್ಲಿ ಪಾಕಿಸ್ತಾನದ ಪತ್ರಕರ್ತ, ಪಾಕಿಸ್ತಾನದ ಏಜೆಂಟ್ ನುಸ್ರತ್ ಮಿರ್ಜಾ ಕೂಡ ಕುಳಿತಿದ್ದಾರೆ. ಇದನ್ನು ಬಿಡುಗಡೆ ಮಾಡಿರುವ ಬಿಜೆಪಿ ಪಕ್ಷದ ವಕ್ತಾರ ಗೌರವ್ ಭಾಟಿಯಾ, ಅನ್ಸಾರಿ ಜೊತೆ ಪಾಕ್‌ ಪತ್ರಕರ್ತನ ನಂಟಿದೆ ಎಂದು ಹೇಳಿದ್ದಾರೆ.

ಈ ಬೆನ್ನಲ್ಲೇ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು, ‘ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಅವರನ್ನು ಯಾವುದೇ ಸಮಾವೇಶಕ್ಕೆ ಆಹ್ವಾನಿಸಿಲ್ಲ. ಆತ ತನಗೆ ಗೊತ್ತಿಲ್ಲವೆಂದು ನೀಡಿರುವ ಹೇಳಿಕೆಗೆ ಬದ್ಧವಾಗಿದ್ದೇನೆ’ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತಕ್ಕೆ ಐದು ಬಾರಿ ಭೇಟಿ ನೀಡಿದ್ದು, ಅಲ್ಲಿನ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿ, ಪಾಕ್‌ನ ಬೇಹುಗಾರಿಕೆ ಸಂಸ್ಥೆ ಐಎಸ್‌ಐಗೆ ರವಾನಿಸಿದ್ದೆ. ಹಮಿದ್‌ ಅನ್ಸಾರಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಹೋಗಿದ್ದೆ’ ಎನ್ನುವ ಅರ್ಥದಲ್ಲಿ ಪಾಕ್‌ ಪತ್ರಕರ್ತ ಮಿರ್ಜಾ ಇತ್ತೀಚೆಗೆ ಪಾಕ್‌ ಟಿ.ವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Share Post