CrimeDistricts

ಕಾಲೇಜು ವಿದ್ಯಾರ್ಥಿಗೆ ಐಸಿಸ್‌ ನಂಟು; ಬಳ್ಳಾರಿಯಲ್ಲಿ ಸಿಕ್ಕಿಬಿದ್ದಾತನ ಕತೆ ಕೇಳಿದರೆ ಬೆಚ್ಚಿಬೀಳ್ತೀರ..!

ಬಳ್ಳಾರಿ; ಎರಡು ದಿನಗಳ ಹಿಂದೆ ಬಳ್ಳಾರಿಯಲ್ಲಿ ಎನ್‌ಐಎ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಇದರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅದರಲ್ಲೊಬ್ಬ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಯಾಗಿರುವಾಗಲೇ ಆತ ಐಸಿಸ್‌ ಸಂಪರ್ಕ ಸಾಧಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. 

ಎರಡು ದಿನಗಳ ಹಿಂದೆ ಎನ್‌ಐಎ ತಂಡ ಕೌಲ್ ಬಜಾರ್ ಪ್ರದೇಶ, ಜಾಗೃತಿ ನಗರ ಬ್ರೂಸ್ ಪೇಟೆ ಏರಿಯಾ ಸೇರಿ ಒಟ್ಟು 8 ಕಡೆ ಶೋಧ ನಡೆಸಿತ್ತು. ಈ ವೇಳೆ ಸೈಯದ್ ಸಮೀರ್ ಮತ್ತು ಮೊಹಮ್ಮದ್ ಸುಲೇಮಾನ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಮೊಹಮ್ಮದ್ ಸುಲೇಮಾನ್ ಉಗ್ರ ಚಟುವಟಿಕೆಯ ಮಾಸ್ಟರ್‌ ಮೈಂಡ್‌ ಎಂದು ಹೇಳಲಾಗಿದೆ. ಇನ್ನು ಸೈಯದ್‌ ಸಮೀರ್‌ ಇನ್ನೂ 20ರ ಯುವಕ. ಈತ ಕಾಲೇಜೊಂದರಲ್ಲಿ ಬಿಸಿಎ ಮೂರನೇ ಸೆಮಿಸ್ಟರ್‌ ಓದುತ್ತಿದ್ದಾನೆ. ಈತ ಐಸಿಸ್‌ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ.

ಶಂಕಿತ ಉಗ್ರ ಹಾಗೂ ವಿದ್ಯಾರ್ಥಿ ಸೈಯದ್‌ ಸಮೀರ್‌, ತನಗೆ ಪಾಠ ಮಾಡುವ ಉಪನ್ಯಾಸಕನ ವಿರುದ್ಧವೇ ತಿರುಗಿಬಿದ್ದಿದ್ದ. ಮುಸ್ಲಿಂ ಬಹುಪತ್ನಿತ್ವ ಮತ್ತು ಮೊಹಮ್ಮದ್ ಪೈಗಂಬರ್ ಬಗ್ಗೆ ಮಾತನಾಡಿದರು ಎಂಬ ಕಾರಣಕ್ಕೆ ಪ್ರಾಧ್ಯಾಪಕರ ವಿರುದ್ಧ ಕಳೆದ ತಿಂಗಳು ಪ್ರತಿಭಟನೆ ಮಾಡಿದ್ದ. ಕಾಲೇಜು ಮುಂದೆ ಹೈಡ್ರಾಮಾ ಮಾಡಿದ್ದಲ್ಲದೆ ನೂರಾರು ಜನರನ್ನು ಸೇರಿಸಿ ಎಸ್‌ಪಿ ಕಚೇರಿ ಬಳಿಯೂ ಪ್ರತಿಭಟನೆ ಮಾಡಿದ್ದ. ಈ ವೇಳೆ ಆತನ ವರ್ತನೆ ಕಂಡು ಪೊಲೀಸರೇ ಹೌಹಾರಿದ್ದರು ಎನ್ನಲಾಗಿದೆ.

 

Share Post