ʻನಿಮಗೇ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ ಪ್ಲೀಸ್ʼ
ಉತ್ತರ ಪ್ರದೇಶ; ಶಾಸಕರೇ ನಾನು ನಿಮಗೇ ಮತ ಹಾಕಿದ್ದೇನೆ.. ನೀವು ಗೆದ್ದಿದ್ದೀರಿ.. ಪ್ಲೀಸ್ ನನಗೊಂದು ಮದುವೆ ಮಾಡಿಸಿ ಎಂದು ವ್ಯಕ್ತಿಯೊಬ್ಬ ಶಾಸಕರೊಬ್ಬರ ಮುಂದೆ ಮನವಿ ಮಾಡಿಕೊಂಡಿದ್ದಾನೆ.. ಇದನ್ನು ಕೇಳಿ ಶಾಸಕ ತಬ್ಬಿಬ್ಬಾಗಿದ್ದಾರೆ.. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ವ್ಯಕ್ತಿಯೊಬ್ಬ ಅಮಾಯಕತನದಿಂದ ಶಾಸಕರಿಗೆ ಈ ಬೇಡಿಕೆ ಇಟ್ಟಿದ್ದಾರೆ.. ಎಷ್ಟು ವರ್ಷವಾದರೂ ಹೆಣ್ಣು ಸಿಗದೇ ಬೇಸತ್ತಿದ್ದ ವ್ಯಕ್ತಿ ನನಗೆ ನೀವೇ ಮದುವೆ ಮಾಡಿಸಬೇಕು ಎಂದು ಶಾಸಕರಿಗೆ ದುಂಬಾಲು ಬಿದ್ದಿದ್ದಾನೆ..
ಚರಖಾರಿ ಕ್ಷೇತ್ರದ ಶಾಸಕ ಬ್ರಿಜ್ ಭೂಷಣ್ ರಜಪೂತ್ ಎಂಬುವವರು ಪೆಟ್ರೋಲ್ ಬಂಕ್‌ಗೆ ತನ್ನ ಕಾರಿಗೆ ಪೆಟ್ರೋಲ್ ಹಾಕಿಸಲು ಬಂದಿದ್ದಾರೆ.. ಈ ವೇಳೆ ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬ ಶಾಸಕರಿಗೆ ಮದುವೆ ಮಾಡಿಸುವಂತೆ ಬೇಡಿಕೆ ಇಟ್ಟಿದ್ದಾನೆ.. ಇದಕ್ಕೆ ಏನು ಉತ್ತರಿಸಬೇಕು ಎಂದು ಶಾಸಕರಿಗೆ ತೋಚದಂತಾಗಿದೆ..
ಕೊನೆಗೆ ಸಮಾಧಾನವಾಗಿ ಉತ್ತರಿಸಿದ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರು ಹುಡುಗಿಯನ್ನು ಹುಡುಕಿ ಮದುವೆ ಮಾಡಿಸುವುದಾಗ ಭರವಸೆ ಕೊಟ್ಟು ಮುಂದಕ್ಕೆ ಹೋಗಿದ್ದಾರೆ.. ಸದ್ಯಕ್ಕೆ ಆ ವ್ಯಕ್ತಿ ಸಮಾಧಾನವೇನೋ ಆಗಿದೆ.. ಆದ್ರೆ, ರಾಜಕಾರಣಿಗಳು ಕೊಡುವ ಭರವಸೆಗಳು ಹೇಗಿರುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿದೆ..