Districts

ರಿಸೆಪ್ಷನ್‌ನಲ್ಲೇ ಕುಸಿದುಬಿದ್ದ ವಧು; ಶ್ರೀನಿವಾಸಪುರ ಯುವತಿ ಬ್ರೈನ್‌ ಡೆಡ್‌

ಕೋಲಾರ: ಮದುವೆ ಆರತಕ್ಷತೆ ಸಮಯದಲ್ಲೇ ವಧು ಕುಸಿದುಬಿದ್ದಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದಿದೆ. ಚೈತ್ರಾ ಎಂಬಾಕೆಯೇ ಮದುವೆ ರಿಸೆಪ್ಷನ್‌ನಲ್ಲಿ ಕುಸಿದುಬಿದ್ದ ವಧು. ಈಕೆ ಬ್ರೈನ್‌ ಡೆಡ್‌ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ರಿಸೆಪ್ಷನ್‌ ವೇಳೆ ಕುಸಿದುಬೀಳುತ್ತಿದ್ದಂತೆ ಚೈತ್ರಾಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆತರಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಚೈತ್ರಾಳ ಬ್ರೈನ್‌ ಡೆಡ್‌ ಆಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಚೈತ್ರಾ ನಿಧನದ ನಂತರ ಆಕೆಯ ಅಂಗಾಂಗಳನ್ನು ದಾನ ಮಾಡಲಾಗುವುದು ಎಂದು ಪೋಷಕರು ಎಂದು ತಿಳಿಸಿದ್ದಾರೆ.

 

Share Post