DistrictsLifestyle

ಇಲ್ಲಿ ಕುಡಿದು ಟೈಟಾದರೆ ಬಾರ್‌ನವರೇ ಉಚಿತವಾಗಿ ಮನೆಗೆ ಬಿಡ್ತಾರಂತೆ!

ಉಡುಪಿ; ಡಿಸೆಂಬರ್‌ 31 ದಿನ ಕುಡಿದು ಟೈಟಾದವರಿಗೆ ಮನೆಗೆ ಬಿಡುವ ವ್ಯವಸ್ಥೆಯನ್ನು ಬಾರ್‌ಗಳವರು ಹಾಗೂ ಪೊಲೀಸರು ಮಾಡುತ್ತಾರೆ.. ಆದ್ರೆ ಇಲ್ಲೊಂದು ಬಾರ್‌ ಇದೆ.. ಇಲ್ಲಿ ಯಾವಾಗ ಕುಡಿದು ಟೈಟಾದರೂ ಅವರನ್ನು ಆಟೋದಲ್ಲಿ ಉಚಿತವಾಗಿ ಮನೆಗೆ ಬಿಡಲಾಗುತ್ತದೆ.. ಹಾಗಂತ ಆಟೋ ಮೇಲೆ ಬ್ಯಾನರ್‌ ಕೂಡಾ ಹಾಕಿಕೊಂಡಿದ್ದಾರೆ.. Namma Kudla – Mangalore ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಇದರ ಫೋಟೋ ಹಂಚಿಕೊಳ್ಳಲಾಗಿದ್ದು, ಇದು ಎಲ್ಲೆಡೆ ವೈರಲ್‌ ಆಗುತ್ತಿದೆ..
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಅಜೆಕಾರು ಎಂಬ ಗ್ರಾಮದಲ್ಲಿ ರಚನಾ ಬಾರ್‌ ಅಂಡ್‌ ರೆಸ್ಟೋರೆಂಟ್‌ ಇದೆ.. ಈ ಬಾರ್‌ನವರು ಗ್ರಾಹಕರನ್ನು ಸೆಳೆಯಲು ಈ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಆಟೋ ಮೇಲೆ ಬ್ಯಾನರ್‌ ಒಂದು ಕಟ್ಟಲಾಗಿದ್ದು, ಅದರಲ್ಲಿ ಕುಡುಕರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಇದೆ ಎಂದು ಬರೆಯಲಾಗಿದೆ..

Share Post