DistrictsPolitics

ಹುಬ್ಬಳ್ಳಿಯಲ್ಲಿ ನಟ ಸುದೀಪ್‌ ಭರ್ಜರಿ ರೋಡ್‌ ಶೋ

ಧಾರವಾಡ; ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ನಟ ಸುದೀಪ್‌ ಭರ್ಜರಿ ರೋಡ್‌ ಶೋ ನಡೆಸಿದರು. ಶೆಟ್ಟರ್‌ಗೆ ಠಕ್ಕರ್‌ ಕೊಡಲು ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್‌ ಜೊತೆ ಬೃಹತ್‌ ರೋಡ್‌ ಶೋ ನಡಸಿದರು. ರಾಜಾಜಿನಗರದ ದೇವಾಂಗ ಪೇಟೆಯಿಂದ ಬೆಂಗೇರಿಯ ಕಲ್ಲೇಶ್ವರ ದೇವಸ್ಥಾನದವರೆಗೆ ರೋಡ್‌ ಶೋ ನಡೆಯಿತು. ಸುದೀಪ್‌ ಮೇಲೆ ಪುಷ್ಪ ಮಳೆಯನ್ನೇ ಸುರಿಸಿದರು.

ಇಲ್ಲಿ ಶೆಟ್ಟರ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್‌ ಟೆಂಗಿನಕಾಯಿ ಸ್ಪರ್ಧೆ ಮಾಡಿದ್ದಾರೆ. ಅವರ ಪರವಾಗಿ ಸುದೀಪ್‌ ಅವರು ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದರು.

Share Post